ಹೊಸ ಆಡಳಿತ ಮಂಡಳಿ ರಚನೆ; ಸಂಘದ ಚಟುವಟಿಕೆಗಳಿಗೆ ಚೈತನ್ಯ
ಹೊಸನಗರ: ಹೊಸನಗರ ತಾಲೂಕು ಒಕ್ಕಲಿಗರ ಸಂಘದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ಪೂರ್ಣಗೊಂಡಿದ್ದು, ಸಂಘದ ಅಧ್ಯಕ್ಷರಾಗಿ ಯುವ ಬಿಜೆಪಿ ಮುಖಂಡ, ಸಂಘಟಕ ಹಾಗೂ ಉದ್ಯಮಿ ಹಾಲಗದ್ದೆ ಉಮೇಶ್ ಅವರು ಆಯ್ಕೆಯಾಗಿದ್ದಾರೆ.

ಸಂಘದ ಉಪಾಧ್ಯಕ್ಷರಾಗಿ ಜಯಶೀಲ ಗೌಡ ಮಾಸ್ತಿಕಟ್ಟೆ, ಕಾರ್ಯದರ್ಶಿಯಾಗಿ ರತ್ನಾಕರ್ ಕುಂಟಿಗೆ, ಖಜಾಂಚಿಯಾಗಿ ಅಂಕಿತ ಮೇಕೇರಿ ಅವರನ್ನು ಆಯ್ಕೆ ಮಾಡಲಾಗಿದೆ.
ಇದೇ ವೇಳೆ ಸಂಘದ ಕಾರ್ಯಕಾರಿ ಸಮಿತಿ ಸದಸ್ಯರಾಗಿ ದಿನೇಶ್ ವಾಟಾಗದ್ದೆ, ಪೂರ್ಣೇಶ್ ಮಲೆಬೈಲ್, ವೆಂಕಟೇಶ್ ಹೆಗಡೆ (ಯಡೂರು), ಕೃಷ್ಣಮೂರ್ತಿ (ಹುಲಿ ಕಿಟ್ಟ), ಸುರೇಶ್ ಕಣಕಿ (ರಾವೆ), ಬಂಗಾರಿ ನಗರ, ವೀಣಾ ಪುರುಷೋತ್ತಮ್ ಕಿಲಗರೇ, ಧರ್ಮಪ್ಪ ವಠಾಗೋಡ್ (ನಿಲ್ಸಕಲ್), ಶ್ರೀನಿವಾಸ್ ಹಾಗೂ ಪ್ರೀತಮ್ ಅವರನ್ನು ನೇಮಕ ಮಾಡಲಾಗಿದೆ.


ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಬಳಿಕ ಮಾತನಾಡಿದ ಹಾಲಗದ್ದೆ ಉಮೇಶ್, ಸಂಘದ ಸದಸ್ಯರು ಹಾಗೂ ಹಿರಿಯರಿಗೆ ಕೃತಜ್ಞತೆ ಸಲ್ಲಿಸಿ, ಸಂಘದ ಭವಿಷ್ಯ ಕುರಿತ ತಮ್ಮ ಆಶಯವನ್ನು ವ್ಯಕ್ತಪಡಿಸಿದರು.
“ನನ್ನ ಮೇಲೆ ನಂಬಿಕೆ ಇಟ್ಟು ಅವಕಾಶ ನೀಡಿದ ಹೊಸನಗರ ತಾಲೂಕು ಒಕ್ಕಲಿಗರ ಸಂಘದ ಎಲ್ಲಾ ಸದಸ್ಯರು ಹಾಗೂ ಹಿರಿಯರಿಗೆ ಹೃತ್ಪೂರ್ವಕ ಧನ್ಯವಾದಗಳು. ಎಲ್ಲರನ್ನು ಒಟ್ಟುಗೂಡಿಸಿಕೊಂಡು, ಸಮಾಜಮುಖಿ ಹಾಗೂ ಅಭಿವೃದ್ಧಿಪರ ಕಾರ್ಯಗಳ ಮೂಲಕ ಸಂಘವನ್ನು ಮಾದರಿ ಸಂಘವನ್ನಾಗಿ ರೂಪಿಸುವ ಸಂಕಲ್ಪ ನನ್ನದು.”
— ಹಾಲಗದ್ದೆ ಉಮೇಶ್, ನೂತನ ಅಧ್ಯಕ್ಷರು
ನೂತನವಾಗಿ ಆಯ್ಕೆಯಾದ ಪದಾಧಿಕಾರಿಗಳು ಹಾಗೂ ಸದಸ್ಯರಿಗೆ ಸಂಘದ ಸದಸ್ಯರು, ಹಿರಿಯರು ಹಾಗೂ ಸಾರ್ವಜನಿಕರು ಅಭಿನಂದನೆ ಸಲ್ಲಿಸಿ, ಸಂಘದ ಮೂಲಕ ಸಮಾಜ ಸೇವೆ ಹಾಗೂ ಅಭಿವೃದ್ಧಿ ಕಾರ್ಯಗಳು ಇನ್ನಷ್ಟು ಪರಿಣಾಮಕಾರಿಯಾಗಿ ನಡೆಯಲಿವೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.








