ಸಮಾಜದ ಸಭೆಯಲ್ಲಿ ಸರ್ವಾನುಮತದಿಂದ ಆಯ್ಕೆ – ನೂತನ ಪದಾಧಿಕಾರಿಗಳ ಘೋಷಣೆ, ಸಮುದಾಯ ಅಭಿವೃದ್ಧಿಗೆ ಬದ್ಧತೆ
ಸಾಗರ: ಸಾಗರ ತಾಲ್ಲೂಕು ಗಂಗಾಮತ ಸಮಾಜದ ನೂತನ ಅಧ್ಯಕ್ಷರಾಗಿ ರವಿಕುಮಾರ್ ಎಸ್. ಯಡೇಹಳ್ಳಿ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಸಾಗರದ ಗಂಗಾಮತ ಸಭಾಭವನದಲ್ಲಿ ಇತ್ತೀಚೆಗೆ ನಡೆದ ಸಾಮಾನ್ಯ ಸಭೆಯಲ್ಲಿ ಸಮಾಜ ಬಾಂಧವರು ಸರ್ವಾನುಮತದಿಂದ ಅವರನ್ನು ಆಯ್ಕೆ ಮಾಡುವ ಮೂಲಕ ತಮ್ಮ ವಿಶ್ವಾಸ ವ್ಯಕ್ತಪಡಿಸಿದರು.
ಸಭೆಯಲ್ಲಿ ಸಮಾಜದ ಸಂಘಟನೆ, ಸಮುದಾಯದ ಅಭಿವೃದ್ಧಿ, ಯುವಜನರ ಶೈಕ್ಷಣಿಕ ಪ್ರಗತಿ, ಉದ್ಯೋಗ ಅವಕಾಶಗಳ ಸೃಷ್ಟಿ ಹಾಗೂ ಸರ್ಕಾರದ ಸೌಲಭ್ಯಗಳನ್ನು ಸಮುದಾಯದ ಪ್ರತಿಯೊಬ್ಬರಿಗೂ ತಲುಪಿಸುವ ಕುರಿತು ಸುದೀರ್ಘ ಚರ್ಚೆ ನಡೆಯಿತು. ಹೊಸ ಆಡಳಿತ ಮಂಡಳಿ ಸಮಾಜದ ಬಲವರ್ಧನೆಗಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುವ ಭರವಸೆ ನೀಡಿತು.



ನವೀಕೃತ ಪದಾಧಿಕಾರಿಗಳು:
ಉಪಾಧ್ಯಕ್ಷರು – ತ್ಯಾಗರ್ತಿ ಪ್ರಕಾಶ್, ಮಂಜುನಾಥ ಹಿಂಡ್ಲೆಕೊಪ್ಪ, ಶ್ರೀನಿವಾಸ್ ದೊಡ್ಮನೆ, ಆನಂದಪುರ
ಕಾರ್ಯದರ್ಶಿ – ದಯಾನಂದ್
ಸಹಕಾರ್ಯದರ್ಶಿ – ದಿನೇಶ್ ಉಳವಿ
ಖಜಾಂಚಿ – ಸುಣ್ಣದ ಸಂತೋಷ್
ನಿರ್ದೇಶಕರು:
ಶಿವಾನಂದ ಗೇರುಬೀಸು, ಜಯಶೀಲ ತ್ಯಾಗರ್ತಿ, ಪರಶುರಾಮ ತ್ಯಾಗರ್ತಿ, ರೇಣುಕಪ್ಪ ಲಕ್ಕವಳ್ಳಿ, ಮಂಜುನಾಥ ಹೆಬ್ಬೋಡಿ, ಕುಮಾರ ಗಿಳಲಗುಂಡಿ, ಸತೀಶ್ ಯಡೇಹಳ್ಳಿ, ದೇವರಾಜ ಶಾಂತಿನಗರ, ರಾಘವೇಂದ್ರ (ಮಾಗಡಿ ಟ್ರೇಡರ್ಸ್, ಸಾಗರ) ಅವರನ್ನು ಆಯ್ಕೆ ಮಾಡಲಾಗಿದೆ.
ಈ ಸಂದರ್ಭದಲ್ಲಿ ಮಾಜಿ ಸಾಗರ ನಗರಸಭೆ ಅಧ್ಯಕ್ಷೆ ಮಧುರಾ ಶಿವಾನಂದ, ಶಿವಾನಂದ, ಸಿಗೇಮಟ್ಟಿ ಭಾಸ್ಕರ, ಪರಶುರಾಮ ತ್ಯಾಗರ್ತಿ ಹಾಗೂ ತಾಲ್ಲೂಕು ಗಂಗಾಮತ ಸಮಾಜ ನೌಕರರ ಸಂಘದ ಅಧ್ಯಕ್ಷ ರವಿ ಆಯನೂರು ಉಪಸ್ಥಿತರಿದ್ದರು. ಸಭೆಯಲ್ಲಿ ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿ, ಸಮಾಜದ ಏಕತೆ ಹಾಗೂ ಪ್ರಗತಿಗಾಗಿ ಎಲ್ಲರೂ ಸಹಕಾರ ನೀಡುವಂತೆ ಮನವಿ ಮಾಡಲಾಯಿತು.








