The fourth anniversary of the auspicious Waramballi Kalyaneshwara Deva.
ವಾರಾಂಬಳ್ಳಿ: ಶ್ರೀ ಕಲ್ಯಾಣೇಶ್ವರ ದೇವರ ನಾಲ್ಕನೇ ವರ್ಷದ ವಾರ್ಷಿಕೋತ್ಸವ ಅದ್ದೂರಿಯಾಗಿ ನಡೆಯಿತು. ಈ ಸಂದರ್ಭದಲ್ಲಿ ಮೊದಲ ಬಾರಿಗೆ ಇಬ್ಬರಿಗೆ ಶ್ರೀ ಕಲ್ಯಾಣೇಶ್ವರ ಸೇವಾ ಪ್ರಶಸ್ತಿಯನ್ನ ನೀಡಿ ಗೌರವಿಸಲಾಯಿತು.

ತ್ರಿಣಿವೆಯ ಆಸ್ಪತ್ರೆಯ ವೈದ್ಯಧಿಕಾರಿ ಡಾ| ಪ್ರತಿಮಾ ಹಾಗೂ ಹೊಸನಗರದ ಗೋ ರಕ್ಷಕ ರಾಘವೇಂದ್ರ ಇವರನ್ನು ಗೌರವಿಸಲಾಯಿತು.


ದೇವಸ್ಥಾನದ ಆಶ್ರಯದಲ್ಲಿ ವಾರ್ಷಿಕೋತ್ಸವದ ಅಂಗವಾಗಿ ಸಮಾಜಮುಖಿ ಕೆಲಸ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ದೇವಸ್ಥಾನ ಆವರಣದಲ್ಲಿ ಯಶಸ್ವಿಯಾಗಿ ನಡೆಸಲಾಯಿತು.

ಅದ್ದೂರಿಯಾಗಿ ನಡೆದ ಶ್ರೀ ಕಲ್ಯಾಣೇಶ್ವರ ದೇವಾಲಯದ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಗಣ್ಯಾತಿಗಣ್ಯರು, ಟ್ರಸ್ಟ್ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯ ಗ್ರಾಮಸ್ಥರು ಉಪಸ್ಥಿತರಿದ್ದರು.








