Hosanagara:ಶ್ರೀ ಮಾರಿಕಾಂಬ ದೇವಿಯ ದರ್ಶನ ಪಡೆದ ಶಾಸಕ ಆರಗ ಜ್ಞಾನೇಂದ್ರ

Photo of author

By vishwachetana807@gmail.com

ಹೊಸನಗರ ಪ್ರಸಿದ್ಧ ಮಾರಿಕಾಂಬ ದೇವಿ ದರ್ಶನ ಪಡೆದ ತೀರ್ಥಹಳ್ಳಿ–ಹೊಸನಗರ ಕ್ಷೇತ್ರದ ಶಾಸಕ – ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ

ಹೊಸನಗರ: ಪಟ್ಟಣದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಎರಡನೇ ದಿನದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನವನ್ನು ತೀರ್ಥಹಳ್ಳಿ–ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಆರಗ ಜ್ಞಾನೇಂದ್ರ ಅವರು ಪಡೆದರು.

ಬಳಿಕ ಜಾತ್ರಾ ಸಮಿತಿ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಸಮಿತಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದೆ ಎಂದು ಪ್ರಶಂಸಿಸಿದರು. ಬಳಿಕ ದೇವಸ್ಥಾನದ ಮೇಲ್ಚಾವಣಿ ಸೇರಿದಂತೆ ವಿವಿಧ ಕಾಮಗಾರಿಗಳನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷರಾದ ಹೇಚ್.ಎಲ್. ದತ್ತಾತ್ರೇಯ, ಮನೋಹರ್, ಸುರೇಶ್ ಸ್ವಾಮಿರಾಮ್, ಹಾಲಗದ್ದೆ ಉಮೇಶ್, ಎ.ವಿ. ಮಲ್ಲಿಕಾರ್ಜುನ್, ನಿತ್ಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Leave a Comment