ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯ ಹಾಗೂ ಶ್ರೀ ರಾಮಕೃಷ್ಣ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ..
ಹೊಸನಗರ: ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯ ಹಾಗೂ ಶ್ರೀ ರಾಮಕೃಷ್ಣ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್‌ನ ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ಅಂಕಪಟ್ಟಿಗೆ ಸಂಬಂಧಿಸಿದಂತೆ ಉಂಟಾಗಿದ್ದ ಗೊಂದಲ ಇದೀಗ ಪರಿಹಾರಗೊಂಡಿದೆ. ಈ ಕುರಿತು ಸಂಸ್ಥೆಯ ಸಂಸ್ಥಾಪಕ ದೇವರಾಜ್ ಅವರು ಪೋಷಕರು ಹಾಗೂ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ನೀಡಿದ್ದು, ಎಲ್ಲರಲ್ಲಿದ್ದ ಆತಂಕ ನಿವಾರಣೆಯಾಗಿದೆ.

ಅಂಕಪಟ್ಟಿಯಲ್ಲಿ ಉಂಟಾಗಿದ್ದ ವ್ಯತ್ಯಾಸಗಳಿಂದ ವಿದ್ಯಾರ್ಥಿಗಳು ಹಾಗೂ ಪೋಷಕರು ಗೊಂದಲ ಮತ್ತು ಚಿಂತೆಗೆ ಒಳಗಾಗಿದ್ದರು. ಇದೀಗ ಸಮಸ್ಯೆ ಬಗೆಹರಿದಿದೆ.
“ಪ್ರಯತ್ನಕ್ಕೆ ತಕ್ಕ ಫಲ; ಪ್ರಯತ್ನವಿಲ್ಲದೆ ಫಲ ನಿರೀಕ್ಷೆ ಸಾಧ್ಯವಿಲ್ಲ. ಸತ್ಯಕ್ಕೆ ಜಯ ಸಿಕ್ಕಿದೆ. ನಾಲ್ಕು ತಿಂಗಳ ಕಾಲ ನಡೆದ ಪ್ರಯತ್ನ ಸಂತೋಷ ತಂದಿದೆ,” ಎಂದು ಸಂಸ್ಥೆಯ ಆಡಳಿತ ಮಂಡಳಿ ತಿಳಿಸಿದೆ.


ವಿಭಾಗದ ಕೆಲವು ಅಧಿಕಾರಿಗಳ ನಿರ್ಲಕ್ಷ್ಯದಿಂದ ಕೆಲಕಾಲ ಪೋಷಕರು ಮತ್ತು ಆಡಳಿತ ಸಮಿತಿಯ ನಡುವೆ ಗೊಂದಲದ ವಾತಾವರಣ ಸೃಷ್ಟಿಯಾಗಿತ್ತು. ಆದರೂ ಪಕ್ಷಾತೀತವಾಗಿ ಎಲ್ಲರೂ ಸಹಕಾರ ನೀಡಿದ್ದು ಸಮಸ್ಯೆ ಪರಿಹಾರಕ್ಕೆ ಸಹಾಯವಾಯಿತು.
ಹೊಸನಗರದಲ್ಲಿ ಅಂಗ್ಲ ಮಾಧ್ಯಮ ಶಾಲೆಯನ್ನು ಪರಿಚಯಿಸಿದ ಮೊದಲ ಸಂಸ್ಥೆಯೆಂದರೆ ಶ್ರೀ ರಾಮಕೃಷ್ಣ ವಿದ್ಯಾಲಯವೇ ಆಗಿದೆ. ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ದಿ. ಹಿರಿಯಣ ಗೌಡರ ಶಿಫಾರಸಿನ ಮೇರೆಗೆ ಶಿಕ್ಷಣ ಸಚಿವ ಗೋವಿಂದ ಗೌಡರು ಶಾಲೆಗೆ ಭೇಟಿ ನೀಡಿ ಅಂಗ್ಲ ಮಾಧ್ಯಮ ಶಾಲೆಯನ್ನು ಪ್ರಾರಂಭಿಸಿ ಚಾಲನೆ ನೀಡಿದ್ದರು. ಈ ಮೂಲಕ ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿದ ಸಂಸ್ಥೆ ಎಂಬ ಹೆಗ್ಗಳಿಕೆಯನ್ನು ರಾಮಕೃಷ್ಣ ವಿದ್ಯಾಲಯ ಪಡೆದುಕೊಂಡಿದೆ.

1997ರಲ್ಲಿ ಆಯುಕ್ತರಿಂದ ಅನುಮತಿ ಪಡೆದುಕೊಂಡು, 2023–24ರವರೆಗೆ ವಿದ್ಯಾರ್ಥಿಗಳ ದಾಖಲಾತಿ ಅನುಮತಿಯನ್ನು ಹೊಂದಿಕೊಂಡು ಶಾಲೆಗಳು ಕಾರ್ಯನಿರ್ವಹಿಸುತ್ತಿದ್ದವು. ಆದರೆ ಒಂದೇ ಸಂಸ್ಥೆಯಲ್ಲಿ ಆಂಗ್ಲ ಮಾಧ್ಯಮ ಮತ್ತು ಕನ್ನಡ ಮಾಧ್ಯಮವನ್ನು ಸಿಬಿಎಸ್‌ಸಿ ಕಟ್ಟಡದಲ್ಲಿ ನಡೆಸುತ್ತಿದ್ದೀರಿ ಎಂಬ ಆರೋಪದ ಹಿನ್ನೆಲೆಯಲ್ಲಿ ಟಿವಿ ಸುದ್ದಿ ಮಾಧ್ಯಮಗಳಿಂದ ಒತ್ತಡ ಎದುರಾಗಿತ್ತು.

ಈ ಹಿನ್ನೆಲೆಯಲ್ಲಿ ಶಾಲೆಗಳಿಗೆ ತಡೆಆಜ್ಞೆ ನೀಡಲಾಗಿದ್ದು, ಪರೀಕ್ಷೆಗಳು ನಡೆದರೂ ಲಾಗಿನ್ ಸಮಸ್ಯೆ, ಡಿಡಿಪಿ ಲೆಟರ್ ನೀಡಲು ನಿರಾಕರಣೆ, ಸರ್ಕಾರದಿಂದ ನೋಟಿಸ್ ಇತ್ಯಾದಿ ಅಡಚಣೆಗಳು ಎದುರಾದವು. ಆದೇಶ ನೀಡಲು ವಿಳಂಬವಾದ ಕಾರಣ ಅಂಕಪಟ್ಟಿಗಳನ್ನು ಸರ್ಕಾರಿ ಶಾಲೆಗೆ ಟ್ಯಾಗ್ ಮಾಡಲಾಗಿತ್ತು.
ನಂತರ ಸಚಿವರ ಮನೆಗೆ ತೆರಳಿ ವಿಚಾರಣೆ ನಡೆಸಲಾಗಿದ್ದು, ಡಿಪಾರ್ಟ್‌ಮೆಂಟ್ ಮಟ್ಟದಲ್ಲಿ ಉಂಟಾದ ತಪ್ಪಿನ ಬಗ್ಗೆ ಸ್ಪಷ್ಟನೆ ದೊರೆತಿತು. ನ್ಯಾಯಾಲಯದಿಂದ ಶೋಕಾಸ್ ನೋಟಿಸ್ ವಜಾಗೊಂಡಿದ್ದು, ಕೋರ್ಟ್ ಆದೇಶದ ಮೇರೆಗೆ ಶಾಲೆಗಳ ಪರವಾಗಿ ತೀರ್ಮಾನ ಕೈಗೊಳ್ಳಲಾಯಿತು. ಈ ಮಧ್ಯೆ ದಸಾರ, ದೀಪಾವಳಿ ಹಾಗೂ ಕ್ರಿಸ್‌ಮಸ್ ರಜೆಗಳ ಕಾರಣ ವಿಳಂಬವೂ ಉಂಟಾಯಿತು.

ಅಂತಿಮವಾಗಿ, ನ್ಯಾಯಾಲಯದ ಆದೇಶದಂತೆ ಎರಡು ವಾರಗಳೊಳಗೆ ಅಂಕಪಟ್ಟಿಗಳನ್ನು ಶ್ರೀ ರಾಮಕೃಷ್ಣ ವಸತಿ ವಿದ್ಯಾಲಯ ಮತ್ತು ಶ್ರೀ ರಾಮಕೃಷ್ಣ ಇಂಟರ್ನ್ಯಾಷನಲ್ ರೆಸಿಡೆನ್ಶಿಯಲ್ ಸ್ಕೂಲ್ ಹೆಸರಲ್ಲಿಯೇ ನೀಡಲು ಸಂಬಂಧಪಟ್ಟ ಇಲಾಖೆಗೆ ಸೂಚಿಸಲಾಗಿದೆ. ಅದರ ಫಲವಾಗಿ, ಇಂದು ಸಂಸ್ಥೆಯ ಹೆಸರಿನ ಎಸ್‌ಎಸ್‌ಎಲ್‌ಸಿ ಅಂಕಪಟ್ಟಿಗಳನ್ನು ವಿದ್ಯಾರ್ಥಿಗಳಿಗೆ ವಿತರಿಸಲಾಗಿದೆ.
13 ವರ್ಷಗಳ ನಿರಂತರ ಗುಣಮಟ್ಟದ ಶಿಕ್ಷಣದಿಂದ ಜಿಲ್ಲೆಯಲ್ಲೇ ಮಾದರಿಯಾಗಿರುವ ಸಂಸ್ಥೆಗಳಾಗಿ ಈ ವಿದ್ಯಾಲಯಗಳು ಗುರುತಿಸಿಕೊಂಡಿದ್ದು, ರಾಜ್ಯ ಮಟ್ಟದಲ್ಲಿಯೂ ತಮ್ಮ ಗೌರವವನ್ನು ಉಳಿಸಿಕೊಂಡಿವೆ.
ಈ ಸಂದರ್ಭದಲ್ಲಿ ನಡೆದ ಸಭೆಯಲ್ಲಿ ಹೊಸನಗರ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದ ರಾಜೇಶ್ ಬಟ್ಟೆ ಮಲ್ಲಪ್ಪ ಹಾಗೂ ಕರುಣಾಕರ್, ಶಾಲೆಯ ಶಿಕ್ಷಕರು ಮತ್ತು ಪೋಷಕರು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಸಂಸ್ಥೆಯ ಆಡಳಿತ ಮಂಡಳಿ ವಿದ್ಯಾರ್ಥಿಗಳು ಭವಿಷ್ಯದಲ್ಲಿ ದೇಶದ ಶಕ್ತಿಯಾಗಿ ಬೆಳೆಯಲಿ ಎಂದು ಹಾರೈಸಿದೆ.







