ಬೆಂಗಳೂರು ಚಿತ್ರೋತ್ಸವಕ್ಕೆ ಹೊಸನಗರದ ಮಕ್ಕಳ ಚಿತ್ರ ‘ಹಕ್ಕಿಗಾಗಿ’ ಆಯ್ಕೆ
ಹೊಸನಗರ : ಅನಿಮಿಷ ಚಿತ್ರ ಶಾಲೆ ನಿರ್ಮಾಣದ, ಗಾರ್ಗಿ ಕಾರೆಹಕ್ಲು ನಿರ್ಮಾಣದ ಮಕ್ಕಳ ಸಿನಿಮಾ ಹಕ್ಕಿಗಾಗಿ ಸಿನಿಮಾ 17ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ.

ಬೆಂಗಳೂರಿನಲ್ಲಿ ಇದೇ ಜನವರಿ 29ರಿಂದ ಆರಂಭ ಆಗಲಿರುವ 17ನೇ ಸಿನಿಮೋತ್ಸವಕ್ಕೆ ಕನ್ನಡದ 15 ಸಿನಿಮಾಗಳು ಆಯ್ಕೆ ಆಗಿದ್ದು ಅದರಲ್ಲಿ ಹಕ್ಕಿಗಾಗಿ ಕೂಡಾ ಸೇರಿದೆ. ಒಟ್ಟು 70 ದೇಶಗಳ 225 ವಿವಿಧ ಭಾಷೆಗಳ ಸಿನಿಮಾಗಳು ಚಿತ್ರೋತ್ಸವದಲ್ಲಿ ಪ್ರದರ್ಶನ ಗೊಳ್ಳಲಿವೆ.
ಹಕ್ಕಿಗಾಗಿ ಸಿನಿಮಾ ಬಹುತೇಕ ಶಿವಮೊಗ್ಗ ಜಿಲ್ಲೆಯ ವಿಶೇಷ ಸ್ಥಳ ಮತ್ತು ಸ್ಥಳೀಯ ಕಲಾವಿದರನ್ನು ಹಾಗೂ ಮಕ್ಕಳನ್ನು ಬಳಸಿಕೊಂಡು ನಿರ್ಮಾಣ ವಾಗಿರುವ ಸಿನಿಮಾ ಆಗಿದ್ದು, ಇದರ ನಿರ್ದೇಶನ ಮತ್ತು ನಿರ್ಮಾಣ ಸಂಸ್ಥೆ ಹೊಂದಿರುವ ಗಾರ್ಗಿ ಕಾರೆ ಹಾಕ್ಲು ಕೂಡಾ ಹೊಸನಗರ ತಾಲ್ಲೂಕಿನವರು ಅನ್ನುವುದು ಮತ್ತೊಂದು ಹೆಮ್ಮೆಯ ಸಂಗತಿ.


ಈಗಾಗಲೇ ಅತ್ಯುತ್ತಮ ಗೀತೆಗಳಿಂದಾಗಿ ಸಾಕಷ್ಟು ಸಂಗೀತ ಪ್ರಿಯರನ್ನು ಸೆಳೆದಿರುವ ಹಕ್ಕಿಗಾಗಿ, ಗ್ರಾಮೀಣ ಸೊಗಡಿನ ಅತ್ಯುತ್ತಮ ಚಿತ್ರಕತೆ ಹೊಂದಿದೆ.
ಚಿತ್ರದಲ್ಲಿ ಹಿರಿಯ ಪತ್ರಕರ್ತ ಡಾ. ನಾಗೇಶ್ ಹೆಗ್ಡೆ ಸೇರಿದಂತೆ ಸ್ಥಳೀಯ ಹಿರಿ ಕಿರಿಯ ಕಲಾವಿದರು ಅಭಿನಯಿಸಿದ್ದಾರೆ. ವಿಶೇಷವಾಗಿ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿರುವ ಎಲ್ಲಾ ಮಕ್ಕಳು ಹೊಸನಗರ ಸಾಗರ ದವರು ಎನ್ನುವುದು ಮತ್ತೊಂದು ವಿಶೇಷ.
ಹಕ್ಕಿಗಾಗಿ ಇನ್ನೂ ಹೆಚ್ಚಿನ ಯಶಸ್ಸು. ಪ್ರಶಸ್ತಿ ಗಳಿಸುವಂತಾಗಲಿ ಎಂಬುದು ಸಿನಿ ಪ್ರೇಮಿಗಳ ಒತ್ತಾಸೆ…









