Hosanagara:ಹೊಸನಗರ ತಾಲ್ಲೂಕಿನಲ್ಲಿ ಯುವಕ ಕಾಣೆ – ಧನುಷ್ ಎನ್.ಡಿ ಬಗ್ಗೆ ಪೊಲೀಸರ ತನಿಖೆ

Photo of author

By vishwachetana807@gmail.com

ಹೊಸನಗರ: ತಾಲೂಕಿನ ಹುಂಚ ಗ್ರಾಮದ ಮಾರ್ನಮಿಬೈಲು ನಿವಾಸಿ ಧನುಷ್ ಎನ್.ಡಿ. (25) ಎಂಬ ಯುವಕ ಜ.19 ರಂದು ಬೆಳಗ್ಗೆ ಮನೆಯಿಂದ ಶಿವಮೊಗ್ಗದ ಮಹೇಂದ್ರ ಶೋರೂಮ್‌ಗೆ ತೆರಳುವುದಾಗಿ ಹೇಳಿ ಹೊರಟು ಹೋಗಿದ್ದು, ಈವರೆಗೂ ಮನೆಗೆ ಹಿಂದಿರುಗದೆ ಕಾಣೆಯಾಗಿರುವ ಘಟನೆ ನಡೆದಿದೆ.

ಧನುಷ್ ಶಿವಮೊಗ್ಗಕ್ಕೆ ತೆರಳಿದ ಬಳಿಕ ಕಾಣೆಯಾಗಿದ್ದು, ಸಂಬಂಧಿಕರು ಹಾಗೂ ಕುಟುಂಬಸ್ಥರು ಎಲ್ಲೆಡೆ ಹುಡುಕಾಟ ನಡೆಸಿದರೂ ಯಾವುದೇ ಸುಳಿವು ಲಭಿಸಿಲ್ಲ. ಈ ಹಿನ್ನೆಲೆಯಲ್ಲಿ ಕಾಣೆಯಾದ ಯುವಕನ ತಂದೆ ದಿನೇಶ್ ಮರಗಿ ಅವರು ರಿಪ್ಪನ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.

ಕಾಣೆಯಾದ ಯುವಕನ ವಿವರಗಳು:

ಹೆಸರು: ಧನುಷ್ ಎನ್.ಡಿ (ಬಿನ್ ದಿನೇಶ್ ಮರಗಿ)
ವಯಸ್ಸು: 25 ವರ್ಷ
ಎತ್ತರ: ಸುಮಾರು 5 ಅಡಿ 7 ಇಂಚು
ಮೈಬಣ್ಣ: ಎಣ್ಣೆಗೆಂಪು
ಮುಖ: ಕೋಲು ಮುಖ
ಮೈಕಟ್ಟು: ಸಾಧಾರಣ
ಭಾಷೆ: ಕನ್ನಡ
ಉದ್ಯೋಗ: ಟೆಕ್ನಿಷಿಯನ್

ಈತನ ಕುರಿತು ಯಾವುದೇ ಮಾಹಿತಿ ದೊರೆತಲ್ಲಿ ಕೆಳಕಂಡ ಪೊಲೀಸ್ ಅಧಿಕಾರಿಗಳನ್ನು ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ:
ಪೊಲೀಸ್ ಉಪನಿರೀಕ್ಷಕರು, ರಿಪ್ಪನ್‌ಪೇಟೆ ಪೊಲೀಸ್ ಠಾಣೆ – 9480803365
ಪೊಲೀಸ್ ನಿರೀಕ್ಷಕರು, ಹೊಸನಗರ ವೃತ್ತ – 9480803337
ಪೊಲೀಸ್ ಉಪಾಧೀಕ್ಷಕರು, ತೀರ್ಥಹಳ್ಳಿ ಉಪವಿಭಾಗ – 9480803340

Leave a Comment