ಸುಳ್ಳು ಹೇಳುವ ಮೋದಿಗೆ ‘ಆಸ್ಕರ್ ಅವಾರ್ಡ್’ ಕೊಡಬೇಕು: ಶಿವಮೊಗ್ಗದಲ್ಲಿ ಸಲೀಂ ಅಹ್ಮದ್ ವಾಗ್ದಾಳಿ

Photo of author

By vishwachetana807@gmail.com

Modi should be given an ‘Oscar Award’ for lying: Salim Ahmed attacks in Shivamogga

ಶಿವಮೊಗ್ಗ, ಜ. 25:
ಕೇಂದ್ರದಲ್ಲಿ ಅಧಿಕಾರಕ್ಕೆ ಬರುವ ಮುನ್ನ ಕಪ್ಪು ಹಣ ತರುತ್ತೇವೆ, ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ, ರೈತರ ಆದಾಯವನ್ನು ದುಪ್ಪಟ್ಟು ಮಾಡುತ್ತೇವೆ ಎಂದು ಭರವಸೆ ನೀಡಿದ್ದ ಬಿಜೆಪಿ, ಕಳೆದ 12 ವರ್ಷಗಳಲ್ಲಿ ಜನರಿಗೆ ಕೇವಲ ಸುಳ್ಳನ್ನೇ ಉಣಬಡಿಸಿದೆ. ಇಂತಹ ಸರಣಿ ಸುಳ್ಳುಗಳಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ‘ಆಸ್ಕರ್ ಅವಾರ್ಡ್’ ನೀಡಬೇಕು ಎಂದು ವಿಧಾನ ಪರಿಷತ್ತಿನ ಸರ್ಕಾರಿ ಮುಖ್ಯ ಸಚೇತಕ ಸಲೀಂ ಅಹ್ಮದ್ ಲೇವಡಿ ಮಾಡಿದರು.

ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಕೇಂದ್ರ ಸರ್ಕಾರದ ವೈಫಲ್ಯಗಳನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.

“ಇವತ್ತು ಬಿಜೆಪಿ ನಾಯಕರು ಯಾವ ಧೈರ್ಯದಿಂದ ನಮ್ಮನ್ನು ಟೀಕೆ ಮಾಡುತ್ತಾರೆ? ಕೇಂದ್ರ ಸರ್ಕಾರ ಎಲ್ಲ ರಂಗಗಳಲ್ಲೂ ಸಂಪೂರ್ಣ ವಿಫಲವಾಗಿದೆ. ಜನರ ಕೈಗೆ ಉದ್ಯೋಗ ಸಿಕ್ಕಿಲ್ಲ, ರೈತರ ಆದಾಯ ಹೆಚ್ಚಾಗಿಲ್ಲ, ವಿದೇಶದಿಂದ ಕಪ್ಪು ಹಣವೂ ಬರಲಿಲ್ಲ. ಜನ ಇಂದು ಬಿಜೆಪಿಯ ಸುಳ್ಳುಗಳಿಂದ ಬೇಸತ್ತು ಹೋಗಿದ್ದಾರೆ. ಅವರ ಈ ವೈಫಲ್ಯಗಳನ್ನು ನಾವು ಮನೆಮನೆಗೆ ತಲುಪಿಸುತ್ತೇವೆ,” ಎಂದು ಅವರು ಹೇಳಿದರು.

ರಾಜ್ಯ ಸರ್ಕಾರದ ಸಾಧನೆಗಳನ್ನು ಸಮರ್ಥಿಸಿಕೊಂಡ ಸಲೀಂ ಅಹ್ಮದ್, “ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ಅವರ ನೇತೃತ್ವದಲ್ಲಿ ನಾವು ನುಡಿದಂತೆ ನಡೆದಿದ್ದೇವೆ. ಅಧಿಕಾರಕ್ಕೆ ಬಂದ ಕೇವಲ ಎರಡೇ ವರ್ಷದಲ್ಲಿ ಐದು ಗ್ಯಾರಂಟಿಗಳನ್ನು ಜಾರಿಗೆ ತಂದಿದ್ದೇವೆ. ಇದು ‘ಸರ್ವರಿಗೂ ಸಮಪಾಲು, ಸರ್ವರಿಗೂ ಸಮಬಾಳು’ ತತ್ವದ ಯಶಸ್ಸು. ನಾವು ಗೆದ್ದಿದ್ದೇವೆ ಎಂದು ಬೀಗುತ್ತಿಲ್ಲ, ಜನರ ಸೇವೆಯೇ ನಮ್ಮ ಸಂಕಲ್ಪ,” ಎಂದರು.

ಗ್ಯಾರಂಟಿ ಯೋಜನೆಗಳ ಸಾಧನೆಗಳು:
•ಶಕ್ತಿ ಯೋಜನೆ: ಇದುವರೆಗೆ 600 ಕೋಟಿ ಬಾರಿ ಮಹಿಳೆಯರು ಉಚಿತ ಬಸ್ ಪ್ರಯಾಣ ಮಾಡಿದ್ದಾರೆ.
•ಆರ್ಥಿಕ ನೆರವು: ಗ್ಯಾರಂಟಿ ಯೋಜನೆಗಳಿಗೆ ವರ್ಷಕ್ಕೆ ಸುಮಾರು 58 ಸಾವಿರ ಕೋಟಿ ರೂ. ವೆಚ್ಚ.
•ಚುನಾವಣಾ ಸಿದ್ಧತೆ: ಏಪ್ರಿಲ್ ಅಥವಾ ಮೇನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯತ್ ಚುನಾವಣೆ ನಡೆಯುವ      

•ಸಾಧ್ಯತೆ; ಗ್ಯಾರಂಟಿಗಳೇ ನಮ್ಮ ಶಕ್ತಿ ಎಂದು ಹೇಳಿದರು.

13ರಂದು ಹಾವೇರಿಯಲ್ಲಿ ಸರ್ಕಾರದ ಸಾಧನೆಗಳನ್ನು ಸಾರುವ ಐತಿಹಾಸಿಕ ಸಮಾವೇಶ ನಡೆಯಲಿದೆ ಎಂದು ಮಾಹಿತಿ ನೀಡಿದರು. ಪತ್ರಿಕಾಗೋಷ್ಠಿಯಲ್ಲಿ

ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಆರ್. ಪ್ರಸನ್ನ ಕುಮಾರ್.   ವಿಧಾನ ಪರಿಷತ್ತಿನ ಸದಸ್ಯೆ ಬಲ್ಕಿಸ್ ಬಾನು,ಹೆಚ್ ಸಿ ಯೋಗೇಶ್ ಸೇರಿದಂತೆ ಜಿಲ್ಲಾ ಕಾಂಗ್ರೆಸ್ ಪ್ರಮುಖರು ಉಪಸ್ಥಿತರಿದ್ದರು.

Leave a Comment