ಸಮಾಜ ಪರಿವರ್ತನೆಯಲ್ಲಿ ದಾಸ ಸಾಹಿತ್ಯ ಪ್ರಮುಖ ಪಾತ್ರವಹಿಸಿದೆ : ಪ.ರಾ. ಕೃಷ್ಣಮೂರ್ತಿ

Photo of author

By vishwachetana807@gmail.com

ಹೊಸನಗರ: ಕರ್ನಾಟಕ ಸಂಗೀತಕ್ಕೆ ದೃಢವಾದ ಅಡಿಪಾಯ ಹಾಕಿದವರು ಪುರಂದರದಾಸರು. ಅದಕ್ಕಾಗಿ ಅವರನ್ನು ಕರ್ನಾಟಕ ಸಂಗೀತದ ಪಿತಾಮಹ ಎಂದು ತ್ಯಾಗರಾಜರೂ ಕರೆದಿದ್ದಾರೆ. ಸುಮಾರು ನಾಲ್ಕು ಲಕ್ಷ ಕೀರ್ತನೆಗಳನ್ನು ರಚಿಸಿರುವ ಅವರು ಸಮಾಜದಲ್ಲಿರುವ ಮೂಢನಂಬಿಕೆ, ಭೇದಭಾವ ಮುಂತಾದ ದುಷ್ಪ್ರಥೆಗಳ ನಿವಾರಣೆಗೆ ಸರಳ ಭಾಷೆಯಲ್ಲಿ ಗೀತೆಗಳನ್ನು ರಚಿಸಿದ್ದಾರೆ. ಸಕಲ ವೇದಗಳ ಸಾರವನ್ನು ಸುಲಭವಾಗಿ ಜನಸಾಮಾನ್ಯರಿಗೆ ತಲುಪಿಸಿದ ಪುರಂದರದಾಸರ ಕೀರ್ತನೆಗಳು ಕ್ರಿ.ಶ. 1500ರ ಕಾಲಘಟ್ಟದಲ್ಲಿ ರಚಿಸಲ್ಪಟ್ಟಿದ್ದರೂ ಇಂದಿಗೂ ಅಷ್ಟೇ ಪ್ರಸ್ತುತ ಹಾಗೂ ಜನಪ್ರಿಯವಾಗಿದ್ದು ಸಮಾಜ ಪರಿವರ್ತನೆಯಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ ಎಂದು ಸಂಸ್ಕಾರ ಭಾರತಿಯ ಅಖಿಲ ಭಾರತ ಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ ತಿಳಿಸಿದರು.

ಕಾರಣಗಿರಿ ಶ್ರೀ ಸಿದ್ಧಿವಿನಾಯಕ ಸಭಾಭವನದಲ್ಲಿ ಗ್ರಾಮಭಾರತಿ ಟ್ರಸ್ಟ್ ಮತ್ತು ರಾಷ್ಟ್ರೋತ್ಥಾನ ಬಳಗ, ಕಾರಣಗಿರಿ ಆಶ್ರಯದಲ್ಲಿ ನಡೆದ ಪುರಂದರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಗ್ರಾಮಭಾರತಿ ಟ್ರಸ್ಟ್ ಅಧ್ಯಕ್ಷ ಹನಿಯ ರವಿ, ರಾಷ್ಟ್ರೋತ್ಥಾನ ಬಳಗದ ಅಧ್ಯಕ್ಷ ನಳಿನಚಂದ್ರ ಕೆ.ಎಸ್., ಹನಿಯ ಗುರುಮೂರ್ತಿ, ಆರತಿ ಮಹೇಶ್, ಸರಸ್ವತಿ ಎನ್. ಸೇರಿದಂತೆ ಹಲವರು ಉಪಸ್ಥಿತರಿದ್ದರು.

ವಿವಿಧ ಭಜನಾ ಮಂಡಳಿಗಳ ಕಲಾವಿದರು ಪುರಂದರದಾಸರ ಕೀರ್ತನೆಗಳನ್ನು ಹಾಡಿದರು. ನಳಿನಚಂದ್ರ, ವಿನಾಯಕ ಪ್ರಭು ಸೇರಿದಂತೆ ಹಲವರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.


ಪಕ್ಕವಾದ್ಯದಲ್ಲಿ ಸಂತ ಶಿಶುನಾಳ ಪ್ರಶಸ್ತಿ ಪುರಸ್ಕೃತ ಗರ್ತಿಕೆರೆ ರಾಘಣ್ಣ ಹಾಗೂ ದೇವದಾಸ ಆಚಾರ್ ಸಹಕರಿಸಿದರು.

Leave a Comment