ಜಿಲ್ಲಾ ಮಟ್ಟದ ಕ್ರೀಡಾಕೂಟ:ಹೊಸನಗರ ಪಿಎಂ ಶ್ರೀ ಶಾಲಾ ಮಕ್ಕಳ ಅಮೋಘ ಸಾಧನೆ

Photo of author

By vishwachetana807@gmail.com

ಹೊಸನಗರ | ಫೆಬ್ರವರಿ 20, 2026
ಶಿವಮೊಗ್ಗ ಜಿಲ್ಲೆಯ 14 ಪಿಎಂ ಶ್ರೀ ಶಾಲೆಗಳ ನಡುವೆ ನಡೆದ ಜಿಲ್ಲಾ ಮಟ್ಟದ ಪ್ರತಿಷ್ಠಿತ ಕ್ರೀಡಾಕೂಟದಲ್ಲಿ, ಹೊಸನಗರದ ಶಾಸಕರ ಮಾದರಿ ಹಿರಿಯ ಪ್ರಾಥಮಿಕ ಶಾಲೆ (ಪಿಎಂ ಶ್ರೀ ಶಾಲೆ) ಅಮೋಘ ಪ್ರದರ್ಶನ ನೀಡುವ ಮೂಲಕ ಜಿಲ್ಲಾ ಮಟ್ಟದಲ್ಲಿ ತನ್ನ ಛಾಪು ಮೂಡಿಸಿದೆ. ನಮ್ಮ ಶಾಲೆಯ ಕ್ರೀಡಾಪಟುಗಳು ವಿವಿಧ ಸ್ಪರ್ಧೆಗಳಲ್ಲಿ ಅತಿ ಹೆಚ್ಚು ಬಹುಮಾನಗಳನ್ನು ಬಾಚಿಕೊಳ್ಳುವ ಮೂಲಕ ಸಾಧನೆಯ ಶಿಖರ ಏರಿದ್ದಾರೆ.

ಸಾಧಕರ ಪಟ್ಟಿ: ಬಾಲಕರ ವಿಭಾಗ: ಖೋ ಖೋ (ಪ್ರಥಮ), ಉದ್ದ ಜಿಗಿತ (ಪ್ರಥಮ), ವಾಲಿಬಾಲ್ (ದ್ವಿತೀಯ), ಮತ್ತು 100 ಮೀ. ಓಟ (ದ್ವಿತೀಯ).
ಬಾಲಕಿಯರ ವಿಭಾಗ: ವಾಲಿಬಾಲ್ ಮತ್ತು ತಟ್ಟೆ ಎಸೆತ (ಪ್ರಥಮ), ಎತ್ತರ ಜಿಗಿತ (ಪ್ರಥಮ ಮತ್ತು ದ್ವಿತೀಯ), ತ್ರೋಬಾಲ್ ಹಾಗೂ 100 ಮೀ. ಓಟ (ದ್ವಿತೀಯ), 4×100 ಮೀ. ರಿಲೇ (ದ್ವಿತೀಯ).

“ಶ್ರಮಕ್ಕೆ ಸಂದ ಜಯ: ಗಣ್ಯರ ಮತ್ತು ಪೋಷಕರ ಶ್ಲಾಘನೆ”
ಶಾಲೆಯ ಕೀರ್ತಿಯನ್ನು ಜಿಲ್ಲಾ ಮಟ್ಟದಲ್ಲಿ ಎತ್ತಿ ಹಿಡಿದ ಎಲ್ಲಾ ಕ್ರೀಡಾಪಟುಗಳಿಗೆ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ (SDMC) ಅಧ್ಯಕ್ಷರಾದ ಶ್ರೀ ರಮೇಶ್ ನೇರಳೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

ಶಾಲೆಯ ಕೀರ್ತಿಯನ್ನು ಜಿಲ್ಲಾ ಮಟ್ಟದಲ್ಲಿ ಎತ್ತಿ ಹಿಡಿದ ಎಲ್ಲಾ ಕ್ರೀಡಾಪಟುಗಳಿಗೆ ಶಾಲಾ ಅಭಿವೃದ್ಧಿ ಮತ್ತು ಉಸ್ತುವಾರಿ ಸಮಿತಿಯ (SDMC) ಅಧ್ಯಕ್ಷರಾದ ಶ್ರೀ ರಮೇಶ್ ನೇರಳೆ ಅವರು ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.

“ನಮ್ಮ ಶಾಲೆಯ ಮಕ್ಕಳು ಉತ್ತಮ ಓದಿನ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಸಹ ಉತ್ತಮ ಸಾಧನೆ ಮಾಡಿರುವುದು ಹೆಮ್ಮೆಯ ವಿಷಯ. ಅವರ ನಿರಂತರ ಅಭ್ಯಾಸ ಮತ್ತು ಗೆಲುವಿನ ಛಲ ಇಂದು ಜಿಲ್ಲಾ ಮಟ್ಟದಲ್ಲಿ ಶಾಲೆಗೆ ದೊಡ್ಡ ಗೌರವ ತಂದುಕೊಟ್ಟಿದೆ,” ಎಂದು ಅಧ್ಯಕ್ಷರಾದ ರಮೇಶ್ ನೇರಳೆ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.

ಮುಖ್ಯ ಶಿಕ್ಷಕರಾದ ಶ್ರೀ ಹರೀಶ್ ಅವರು ಮಾತನಾಡಿ, “ನಮ್ಮ ಶಾಲೆಯ ಮಕ್ಕಳು ಕ್ರೀಡಾಂಗಣದಲ್ಲಿ ತೋರಿದ ಶಿಸ್ತು ಮತ್ತು ಪರಿಶ್ರಮಕ್ಕೆ ಸಿಕ್ಕ ಪ್ರತಿಫಲವಿದು,” ಎಂದು ಶ್ಲಾಘಿಸಿದರು.
ವಿಶೇಷ ಅಭಿನಂದನೆಗಳು: ಈ ಐತಿಹಾಸಿಕ ಯಶಸ್ಸಿಗೆ ಕಾರಣರಾದ ವಿದ್ಯಾರ್ಥಿಗಳಿಗೆ ಶಾಲೆಯ ಸಮಸ್ತ ಅಧ್ಯಾಪಕ ವೃಂದ ಹಾಗೂ ಪೋಷಕರು ವಿಶೇಷವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಮಕ್ಕಳ ಕ್ರೀಡಾ ಆಸಕ್ತಿಗೆ ಪೋಷಕರು ನೀಡಿದ ಪ್ರೋತ್ಸಾಹ ಮತ್ತು ಶಿಕ್ಷಕರ ಮಾರ್ಗದರ್ಶನವೇ ಈ ಸಾಧನೆಗೆ ಅಡಿಪಾಯ ಎಂದು ಈ ಸಂದರ್ಭದಲ್ಲಿ ಸ್ಮರಿಸಲಾಯಿತು.

ಬರಹ: ತಂಡ, vishwachetana.com

Leave a Comment