ಮತ್ತಿಮನೆಯಲ್ಲಿ ಏಪ್ರಿಲ್ 24ರಿಂದ ಬೃಹತ್ ಕ್ರಿಕೆಟ್ ಹಬ್ಬ: ‘ಕೆವಿಎಸ್ ಟ್ರೋಫಿ-2026

Photo of author

By vishwachetana807@gmail.com

​”ಹೊಸನಗರ-ಸಾಗರ-ತೀರ್ಥಹಳ್ಳಿ ಆಟಗಾರರಿಗೆ ಸುವರ್ಣಾವಕಾಶ: ಕೆವಿಎಸ್ ಟ್ರೋಫಿಗಾಗಿ ಶುರುವಾಗಲಿದೆ ಕ್ರೀಡಾ ಹಬ್ಬ”

ಹೊಸನಗರ: ತಾಲೂಕಿನ ಮತ್ತಿಮನೆಯಲ್ಲಿ ದಿ|| ಕೆ.ವಿ. ಸುಬ್ರಹ್ಮಣ್ಯ ಅವರ ಸವಿನೆನಪಿಗಾಗಿ ಜಿಲ್ಲಾ ಮಟ್ಟದ ಬೃಹತ್ ಲೈಟ್ ಟೆನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ‘ಕೆವಿಎಸ್ ಟ್ರೋಫಿ-2026’ (ಮತ್ತಿಮನೆ ಪ್ರೀಮಿಯರ್ ಲೀಗ್) ಆಯೋಜಿಸಲಾಗಿದೆ.
ಕೆ.ವಿ. ಸುಬ್ರಹ್ಮಣ್ಯ ಮೆಮೋರಿಯಲ್ ಟ್ರಸ್ಟ್ ಹಾಗೂ ಇಂಚರ ಸ್ಪೋರ್ಟ್ಸ್ ಮತ್ತಿಮನೆ ಇವರ ಸಂಯುಕ್ತ ಆಶ್ರಯದಲ್ಲಿ ಸತತ ಮೂರನೇ ವರ್ಷಕ್ಕೆ ಈ ಯಶಸ್ವಿ ಪಂದ್ಯಾವಳಿ ಆಯೋಜನೆಯಾಗುತ್ತಿದ್ದು, ಏಪ್ರಿಲ್ 24, 25 ಮತ್ತು 26ರಂದು ಸ್ಥಳೀಯ ಕಂಠೀರವ ಕ್ರೀಡಾಂಗಣದಲ್ಲಿ ಪಂದ್ಯಗಳು ಜರುಗಲಿವೆ.

ಲಕ್ಷಾಂತರ ರೂಪಾಯಿ ಬಹುಮಾನ:  ಈಪಂದ್ಯಾವಳಿಯ ವಿಜೇತ ತಂಡಕ್ಕೆ 1,11,111 ರೂ. ನಗದು ಹಾಗೂ ಆಕರ್ಷಕ ಟ್ರೋಫಿ ನೀಡಲಾಗುವುದು. ದ್ವಿತೀಯ ಸ್ಥಾನ ಪಡೆದ ತಂಡಕ್ಕೆ 55,555 ರೂ. ನಗದು ಮತ್ತು ಟ್ರೋಫಿ ಲಭಿಸಲಿದೆ. ವೈಯಕ್ತಿಕ ಪ್ರದರ್ಶನ ನೀಡುವ ಆಟಗಾರರಿಗೆ ಸರಣಿ ಶ್ರೇಷ್ಠ (ಸೈಕಲ್), ಬೆಸ್ಟ್ ಬ್ಯಾಟ್ಸ್‌ಮನ್ ಹಾಗೂ ಬೆಸ್ಟ್ ಬೌಲರ್ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗುತ್ತದೆ.

ತೀವ್ರ ಪೈಪೋಟಿ:ಈ ಬಾರಿ ಒಟ್ಟು 16 ಫ್ರಾಂಚೈಸಿ ತಂಡಗಳು ಕಣಕ್ಕಿಳಿಯಲಿದ್ದು, ಹೊಸನಗರ, ತೀರ್ಥಹಳ್ಳಿ ಹಾಗೂ ಸಾಗರ ತಾಲೂಕಿನ ಪ್ರತಿಭಾವಂತ ಆಟಗಾರರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ವಿಶೇಷವೆಂದರೆ, ಪ್ರತಿ ತಂಡದಲ್ಲಿ ಶಿವಮೊಗ್ಗ ಅಥವಾ ಚಿಕ್ಕಮಗಳೂರು ಜಿಲ್ಲೆಯ ಓರ್ವ ಐಕಾನ್ ಆಟಗಾರ ಕಣಕ್ಕಿಳಿಯಲಿದ್ದು, ಪಂದ್ಯಾವಳಿಯ ರಂಗು ಹೆಚ್ಚಿಸಲಿದ್ದಾರೆ.

ನೇರಪ್ರಸಾರ:ನಾಡಿನ ಹೆಮ್ಮೆಯ ನಾಯಕರು ಹಾಗೂ ಹೊಸನಗರ ತಾಲ್ಲೂಕು ಬಿಜೆಪಿ ಮಂಡಲದ ಮಾಜಿ ಅಧ್ಯಕ್ಷರಾಗಿದ್ದ ದಿ|| ಕೆ.ವಿ. ಸುಬ್ರಹ್ಮಣ್ಯ ಮತ್ತಿಮನೆ ಅವರ ಸ್ಮರಣಾರ್ಥ ನಡೆಯುವ ಈ ಪಂದ್ಯಕೂಟವು ಡಿಜಿಟಲ್ ಪ್ಲಾಟ್‌ಫಾರ್ಮ್‌ಗಳಲ್ಲಿ ನೇರಪ್ರಸಾರವಾಗಲಿದೆ.

“ಈ ಕ್ರೀಡಾಕೂಟವು ಕೇವಲ ಆಟವಲ್ಲ, ಇದು ನಮ್ಮ ನೆಚ್ಚಿನ ನಾಯಕ ಕೆ.ವಿ. ಸುಬ್ರಹ್ಮಣ್ಯ ಅವರ ಮೇಲಿನ ಗೌರವ. ಹೆಚ್ಚಿನ ಸಂಖ್ಯೆಯಲ್ಲಿ ಕ್ರೀಡಾಭಿಮಾನಿಗಳು ಆಗಮಿಸಿ ಈ ಕ್ರೀಡಾ ಹಬ್ಬವನ್ನು ಯಶಸ್ವಿಗೊಳಿಸಬೇಕು,” ಎಂದು ಇಂಚರ ಸ್ಪೋರ್ಟ್ಸ್ ಮತ್ತು ಟ್ರಸ್ಟ್ ಪ್ರಕಟಣೆಯಲ್ಲಿ ವಿನಂತಿಸಿದೆ.

Leave a Comment