ಕಲಾಕೌಸ್ತುಭ ಕನ್ನಡ ಸಂಘದ ಮೇಲೆ ಲಾಟರಿ ವಂಚನೆಯ ಆರೋಪ – ಸಾರ್ವಜನಿಕರ ದೂರು

Photo of author

By vishwachetana807@gmail.com

ರಿಪ್ಪನ್ ಪೇಟೆ: ಕನ್ನಡ ರಾಜ್ಯೋತ್ಸವ ಆಚರಣೆ ಸಂದರ್ಭ, ಲಾಟರಿ ಯೋಜನೆ ಮಾಡಿ ಬಹುಮಾನ ನೀಡದೆ ಜನರನ್ನುವಂಚಿಸಲಾಗಿದೆ ಎಂದು ಆರೋಪಿಸಿರುವ ಸಾರ್ವಜನಿಕರು, ಗುರುವಾರ ಪಟ್ಟಣದ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಕಲಾಕೌಸ್ತುಭ ಸಂಘ ಎಂಬ ಹೆಸರಿನಲ್ಲಿ ಮುದ್ರಿತವಾದ ಲಕ್ಕಿ ಡ್ರಾ ಟಿಕೆಟ್‌ನ ದರ 100 ರೂ. ಗಳಾಗಿತ್ತು. ಎಲೆಕ್ಟಿಕ್ ಬೈಕ್ ಹಾಗೂ ಸೈಕಲ್ ಬಹುಮಾನಗಳೆಂದು ತಿಳಿಸಿ, 2025ರ ನವೆಂಬರ್ 3ರಂದು ಡ್ರಾ ಮೂಲಕ ವಿಜೇತರನ್ನು ಆಯ್ಕೆ ಮಾಡಲಾಗುವುದೆಂದು ಘೋಷಿಸಲಾಗಿತ್ತು.

ಸಂಘವು ತನ್ನ ಪದಾಧಿಕಾರಿಗಳ ಮೂಲಕ ಸಾರ್ವಜನಿಕವಾಗಿ ಸಾವಿರಾರು ಜನರಿಗೆ ಟಿಕೆಟ್ ಮಾರಾಟ ಮಾಡಿ, ಲಕ್ಷಾಂತರ ರೂ.ಗಳನ್ನು ಅಕ್ರಮವಾಗಿ ಇದುವರೆಗೂ ಸಂಗ್ರಹಿಸಿದೆ. ಆದರೆ ಈವರೆಗೂ ವಿಜೇತರನ್ನು ಆಯ್ಕೆ ಮಾಡಿ ಬಹುಮಾನ ವಿತರಿಸುವ ಯಾವುದೇ ಪ್ರಕ್ರಿಯೆ ಮಾಡಿಲ್ಲ. ಇವರ ಮಾತನ್ನು ನಂಬಿದ ಜನರು ಲಾಟರಿ ಟಿಕೆಟ್ ಖರೀದಿಸಿ ನಷ್ಟ ಅನುಭವಿಸಿದ್ದಾರೆ.

ನಮ್ಮ ರಾಜ್ಯದಲ್ಲಿ ಲಾಟರಿ ನಡೆಸಲು ನಿಷೇಧವಿದ್ದರೂ ಕಾನೂನು ಬಾಹಿರವಾಗಿ  ಚಟುವಟಿಕೆ ನಡೆಸಿ, ಸಾರ್ವಜನಿಕರನ್ನು ವಂಚಿಸಿದವರ ವಿರುದ್ದ ಪ್ರಕರಣ ದಾಖಲಿಸಿ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ , ಈ ಸಂಬಂಧಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಮತ್ತು ಸಂತ್ರಸ್ತರು ದೂರು ಸಲ್ಲಿಸಿದ್ದಾರೆ.

ಬರಹ: ತಂಡ, vishwachetana.com

Leave a Comment