ಕೇಂದ್ರ ಬಜೆಟ್ 2026-27: ಯಾವುದು ಅಗ್ಗ? ಯಾವುದು ದುಬಾರಿ?

Photo of author

By vishwachetana807@gmail.com

Union-budget-2026-27-what-becomes-cheaper-and-costlier

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026-27ರ ಕೇಂದ್ರ ಬಜೆಟ್‌ನಲ್ಲಿ ಕೆಲವು ಪ್ರಮುಖ ವಸ್ತುಗಳ ಮೇಲಿನ ಸುಂಕವನ್ನು ಕಡಿತಗೊಳಿಸುವ ಮೂಲಕ ಸಾರ್ವಜನಿಕರಿಗೆ ಹಾಗೂ ನಿರ್ದಿಷ್ಟ ವಲಯಗಳಿಗೆ ನೆರವು ನೀಡಲಾಗಿದೆ.


ಬೆಲೆ ಇಳಿಕೆಯಾಗುವ ಸಾಧ್ಯತೆಯಿರುವ ವಸ್ತುಗಳು (ಅಗ್ಗ):
• ಕ್ಯಾನ್ಸರ್ ಔಷಧಗಳು: 17 ಪ್ರಮುಖ ಕ್ಯಾನ್ಸರ್ ಔಷಧಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸರ್ಕಾರ ಮನ್ನಾ ಮಾಡಿದೆ. ಜೊತೆಗೆ 7 ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಬಳಸುವ ಔಷಧಗಳ ಆಮದು ಸುಂಕವನ್ನೂ ಕಡಿತಗೊಳಿಸಲಾಗಿದೆ.
• ಕ್ರೀಡಾ ಪರಿಕರಗಳು: ‘ಖೇಲೋ ಇಂಡಿಯಾ ಮಿಷನ್’ ಅಡಿಯಲ್ಲಿ ಕ್ರೀಡಾ ಸಾಮಗ್ರಿಗಳನ್ನು ಅಗ್ಗವಾಗಿಸುವ ಪ್ರಸ್ತಾಪ ಮಾಡಲಾಗಿದೆ.
• ಚರ್ಮದ ವಸ್ತುಗಳು: ಚರ್ಮದ ಪಾದರಕ್ಷೆಗಳು ಹಾಗೂ ಇತರ ವಸ್ತುಗಳ ರಫ್ತಿಗೆ ಬೇಕಾದ ಕಚ್ಚಾ ವಸ್ತುಗಳ ಆಮದು ಸುಂಕದಲ್ಲಿ ವಿನಾಯಿತಿ ನೀಡಲಾಗಿದೆ.
• ಸಮುದ್ರಾಹಾರ (Sea Food): ಮೀನುಗಾರಿಕಾ ಸಮುದಾಯಕ್ಕೆ ಬೆಂಬಲ ನೀಡಲು ಪ್ರಾದೇಶಿಕ ಸಮುದ್ರ ವ್ಯಾಪ್ತಿಯ ಆಚೆಗಿನ ಮೀನುಗಾರಿಕೆಗೆ ಸುಂಕ ವಿನಾಯಿತಿ ನೀಡಲಾಗಿದೆ.
• ಮೈಕ್ರೋವೇವ್ ಓವನ್: ತಯಾರಿಕೆಯಲ್ಲಿ ಬಳಸುವ ನಿರ್ದಿಷ್ಟ ಬಿಡಿಭಾಗಗಳ ಮೇಲಿನ ಮೂಲ ಕಸ್ಟಮ್ಸ್ ಸುಂಕವನ್ನು ಸರ್ಕಾರ ಮನ್ನಾ ಮಾಡಿದೆ.

ಬೆಲೆ ಏರಿಕೆಯಾಗುವ ಸಾಧ್ಯತೆಯಿರುವ ವಸ್ತುಗಳು (ದುಬಾರಿ):
• ಷೇರು ಮಾರುಕಟ್ಟೆ ವಹಿವಾಟು: STT ಮತ್ತು ಬೈಬ್ಯಾಕ್ ತೆರಿಗೆಯಲ್ಲಿನ ಬದಲಾವಣೆಗಳಿಂದಾಗಿ ಟ್ರೇಡಿಂಗ್ ಚಟುವಟಿಕೆಗಳು ದುಬಾರಿಯಾಗಲಿವೆ.
• ಆಮದು ಮಾಡಿದ ಐಷಾರಾಮಿ ವಸ್ತುಗಳು: ದೇಶೀಯ ಉತ್ಪಾದನೆಗೆ ಉತ್ತೇಜನ ನೀಡಲು ಕೆಲವು ಆಮದು ವಸ್ತುಗಳ ಮೇಲಿನ ಸುಂಕ ಹೆಚ್ಚಿಸಲಾಗಿದೆ.
• ತಂಬಾಕು ಮತ್ತು ಮದ್ಯ: ಈ ಬಾರಿ ಕೂಡ ತಂಬಾಕು ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳವಾಗಲಿದೆ.

ಬಜೆಟ್‌ನ ಇತರ ಪ್ರಮುಖಾಂಶಗಳು:
• ಆದಾಯ ತೆರಿಗೆ: ಹೊಸ ತೆರಿಗೆ ಪದ್ಧತಿಯಲ್ಲಿ ₹12 ಲಕ್ಷವರೆಗೆ ಆದಾಯಕ್ಕೆ ತೆರಿಗೆ ಇಲ್ಲ.
• ಬಂಡವಾಳ ವೆಚ್ಚ: ಮೂಲಸೌಕರ್ಯ ಅಭಿವೃದ್ಧಿಗಾಗಿ ₹12.2 ಲಕ್ಷ ಕೋಟಿ ಮೀಸಲು.

Leave a Comment