ಹೊಸನಗರ: ಪಟ್ಟಣದ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಐದನೇ ದಿನದ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ದೇವಿಯ ದರ್ಶನವನ್ನು ಶಿವಮೊಗ್ಗ ಸಂಸದ ಬಿ.ವೈ. ರಾಘವೇಂದ್ರ ಅವರು ಪಡೆದರು.

ಬಳಿಕ ಜಾತ್ರಾ ಸಮಿತಿ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ದೇವಿಯ ಜಾತ್ರಾ ಮಹೋತ್ಸವ ಕಾರ್ಯಕ್ರಮವನ್ನು ಸಮಿತಿ ಅತ್ಯಂತ ಯಶಸ್ವಿಯಾಗಿ ಆಯೋಜಿಸಿದೆ ಎಂದು ಪ್ರಶಂಸಿಸಿದರು. ಪಕ್ಷದ ಕಾರ್ಯಕರ್ತರು ಹಾಗೂ ಅಭಿಮಾನಿಗಳೊಂದಿಗೆ ಸಂತಸ ವ್ಯಕ್ತಪಡಿಸಿ ಕೆಲವು ಸಮಯ ಕಳೆಯಲಾಯಿತು.



ಈ ಸಂದರ್ಭದಲ್ಲಿ ಮಾರಿಕಾಂಬ ಜಾತ್ರಾ ಸಮಿತಿ ಅಧ್ಯಕ್ಷರಾದ ಹೇಚ್.ಎಲ್. ದತ್ತಾತ್ರೇಯ, ಮನೋಹರ್, ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ಸುರೇಶ್ ಸ್ವಾಮಿರಾವ್, ಎನ್.ಆರ್. ದೇವಾನಂದ್, ಸುರೇಂದ್ರ ಕೋಟ್ಯಾನ್, ಎ.ವಿ. ಮಲ್ಲಿಕಾರ್ಜುನ್, ಯೋಗೇಂದ್ರ ಕತ್ರಿಕೊಪ್ಪ, ಯುವರಾಜ್ ಬಿ.ಚಿಕ್ಕಮಣತಿ, ಮಂಜು ಸಂಜೀವ್ ,ಮಂಡನಿ ಮೋಹನ್, ತೀರ್ಥೇಶ್ , ಗಣೇಶ್ ಹಿರೇಮತಿ,ನಿತ್ಯಾನಂದ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.









