Hosanagara: ಹೊಸನಗರ ಮಾರಿಕಾಂಬಾ ಜಾತ್ರೆಲಿ ಮಾಜಿ ಸಚಿವ ಹರತಾಳು ಹಾಲಪ್ಪ ಜಾಲಿ ರೌಂಡ್

Photo of author

By vishwachetana807@gmail.com

ಹೊಸನಗರ: ಇಲ್ಲಿನ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬಾ ಜಾತ್ರಾ ಮಹೋತ್ಸವಕ್ಕೆ ರಾಜ್ಯ ಬಿಜೆಪಿ ಉಪಾಧ್ಯಕ್ಷ ಹಾಗೂ ಮಾಜಿ ಸಚಿವ ಹರತಾಳು ಹಾಲಪ್ಪ ಅವರು ತಮ್ಮ ಬೆಂಬಲಿಗರೊಂದಿಗೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು.

ಜಾತ್ರಾ ಆಡಳಿತ ಹಾಗೂ ವ್ಯವಸ್ಥಾಪನ ಸಮಿತಿ ವತಿಯಿಂದ ಅಧ್ಯಕ್ಷ ಹೆಚ್.ಎಲ್. ದತ್ತಾತ್ರೇಯ ಅವರು ಅವರನ್ನು ಆತ್ಮೀಯವಾಗಿ ಸನ್ಮಾನಿಸಿದರು. ಈ ಸಂದರ್ಭದಲ್ಲಿ ಎ.ವಿ. ಮಲ್ಲಿಕಾರ್ಜುನ, ಕೃಷ್ಣವೇಣಿ, ನಾಗರತ್ನ, ಶ್ರೀಪತಿ, ಮಂಡಾನಿ ಮೋಹನ್, ಚಾಲುಕ್ಯ ಬಸವರಾಜ್, ಮಂಜುನಾಥ್ ಸಂಜೀವ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಹರತಾಳು ಹಾಲಪ್ಪ ಅವರು ಜಾತ್ರೆಯಲ್ಲಿ ಮಂಡಕ್ಕಿ, ಜಿಲೇಬಿ, ಐಸ್ ಕ್ರೀಂ ಸವಿದು ವಿವಿಧ ಮನೋರಂಜನಾ ಚಟುವಟಿಕೆಗಳನ್ನು ವೀಕ್ಷಿಸಿ ಸಂಭ್ರಮಿಸಿದರು.

Leave a Comment