Applications invited for 9 vacant Home Guard posts in Hosangara Taluk; last date February 3, 2026.
ಹೊಸನಗರ : ತಾಲ್ಲೂಕಿನಲ್ಲಿ ಖಾಲಿ ಇರುವ ಒಟ್ಟು ಒಂಬತ್ತು ಪುರುಷ ಹಾಗು ಮಹಿಳಾ ಗೃಹರಕ್ಷಕ ದಳದ ಸಿಬ್ಬಂದಿಗಳ ಸೇವಾ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು, ಸೂಕ್ತ ಅರ್ಹತೆ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸ ಬಹುದಾಗಿದೆ.

ಅರ್ಜಿದಾರರು ಭಾರತೀಯ ಪ್ರಜೆ ಆಗಿದ್ದು, 19ರಿಂದ 45 ವರ್ಷದೊಳಗಿನವರು ಅರ್ಜಿ ಸಲ್ಲಿಸಬಹುದು. 10ನೇ ತರಗತಿ ಉತ್ತೀರ್ಣರಾದರು, ಆರೋಗ್ಯದಲ್ಲಿ ಸಶಕ್ತರಾಗಿರುವವರು, ಯಾವುದೇ ಕ್ರಿಮಿನಲ್ ಹಿನ್ನಲೆ ಹೊಂದಿಲ್ಲದವರು ಅರ್ಜಿ ಸಲ್ಲಿಸಲು ಅರ್ಹರು.


ಉಚಿತವಾಗಿ ಅರ್ಜಿ ಸಲ್ಲಿಸಲು ಬಯಸುವವರು ಗೃಹ ರಕ್ಷಕ ದಳದ ಘಟಕ/ ಉಪ ಘಟಕದ ಕಚೇರಿಯ ವಾರದ ಕವಾಯತ್ತಿನ ದಿನ ಬೆಳಗ್ಗೆ 10 ರಿಂದ ಸಂಜೆ 5-30 ಸಮಯದಲ್ಲಿ ಅರ್ಜಿ ಪಡೆಯ ಬಹುದು.
ಅರ್ಜಿ ಸಲ್ಲಿಸಲು 2026 ರ ಫೆಬ್ರವರಿ 3 ಕೊನೆಯ ದಿನವಾಗಿದ್ದು, ಹೊಸನಗರ ತಾಲೂಕಿನ ಅರ್ಜಿ ಸಲ್ಲಿಸಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ ಗೃಹ ರಕ್ಷಕದಳದ ಭೋದಕರಾದ ಡಿ. ಮಹೇಶ್ (9632538294) ಹಾಗು ಘಟಕಾಧಿಕಾರಿ 9901004223 ಸಂಪರ್ಕಿಸಲು ಕೋರಿದ್ದಾರೆ.









