Hosanagara marikamba jatre 2026:ಇತಿಹಾಸ ಪ್ರಸಿದ್ಧ  ಶ್ರೀ ಮಾರಿಕಾಂಬ ದೇವಿ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ

Photo of author

By vishwachetana807@gmail.com

The historic Hosanagara Shri Marikamba Devi Jatra festival was inaugurated with a grand ceremony.

Hosanagara: ಪಟ್ಟಣದ ಪ್ರಸಿದ್ಧ ಶ್ರೀ  ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವಕ್ಕೆ ವಿದ್ಯುಕ್ತ ಚಾಲನೆ ದೊರೆತಿದ್ದು ಮಂಗಳವಾರ ಶ್ರೀ ಗಣಪತಿ ದೇವಸ್ಥಾನದಿಂದ ವಿಶೇಷ ಪೂಜೆಯ ಮೂಲಕ ಮಾರಿಕಾಂಬಾ ದೇವಿಯ ಪ್ರತಿಷ್ಠಾಪನ ಮೂರ್ತಿಯನ್ನು ಮೆರವಣಿಗೆ ಮೂಲಕವಾಗಿ ಮಾರಿಕಾಂಬ ದೇವಿಯ ತವರು ಮನೆಯಾದ  ಹಳೇ ಸಾಗರ ರಸ್ತೆಯಲ್ಲಿರುವ ದುರ್ಗಾಂಬಾ ದೇವಸ್ಥಾನದ ಆವರಣದಲ್ಲಿ ಪ್ರತಿಷ್ಠಾಪಿಸಿ ಜಾತ್ರಾ ಮಹೋತ್ಸವಕ್ಕೆ ಚಾಲನೆಯನ್ನು ನೀಡಲಾಯಿತು.

ಇಂದು ರಾತ್ರಿ ತನಕ ದೇವಿಯ ತವರು ಮನೆಯಲ್ಲಿ ವಿಶೇಷ ಪೂಜೆ ಹಾಗೂ ಉಡಿ ತುಂಬುವ ಪೂಜಾ ವಿಧಿವಿಧಾನಗಳು ನಡೆಯಲಿದ್ದು, ಬುಧವಾರದಿಂದ ಮಾರಿಗುಡ್ಡದಲ್ಲಿರುವ ದೇವಿಯ ಗಂಡನ ಮನೆ ಎಂದೇ ಖ್ಯಾತಿ ಪಡೆದ ಮಾರಿಗುಡಿ ದೇವಸ್ಥಾನದ ಆವರಣದಲ್ಲಿ ಎಂಟು ದಿನಗಳ ಕಾಲ ದೇವಿಯನ್ನು ಪ್ರತಿಷ್ಠಾಪಿಸಿ ಪೂಜಿಸಲಾಗುವುದು. ಪ್ರತಿದಿನ ರಾತ್ರಿ 8 ಗಂಟೆಗೆ ವಿಶೇಷ ಪೂಜೆ ನಡೆಯಲಿದ್ದು, ಪ್ರತಿದಿನ ಸಂಜೆ ವಿವಿಧ ಮನರಂಜನಾ ಕಾರ್ಯಕ್ರಮಗಳು ಆಯೋಜಿಸಲಾಗಿವೆ.

ಜನವರಿ 22, 2026ರ ಗುರುವಾರ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮಗಳ ಉದ್ಘಾಟನೆ ನಡೆಯಲಿದ್ದು, ಹೊಸನಗರ–ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಅವರು ಉದ್ಘಾಟನೆ ನೆರವೇರಿಸಲಿದ್ದಾರೆ. ಈ ಸಮಾರಂಭದ ಅಧ್ಯಕ್ಷತೆಯನ್ನು ದತ್ತಾತ್ರೇಯ ಅವರು ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಂಸದ ಬಿ.ವೈ. ರಾಘವೇಂದ್ರ, ಶಾಸಕ ಆರಗ ಜ್ಞಾನೇಂದ್ರ, ಆರ್.ಎಂ. ಮಂಜುನಾಥ ಗೌಡ, ಕಲಗೋಡು ರತ್ನಾಕರ್ ಹಾಗೂ ನಗರ ಮಹಾದೇವಪ್ಪ ಭಾಗವಹಿಸಲಿದ್ದಾರೆ.

ಈ ಬಾರಿಯ ಹೊಸನಗರ ಜಾತ್ರೆಯ ವಿಶೇಷತೆಗಳು ಏನು ಗೊತ್ತಾ..? ಇಲ್ಲಿ ಕ್ಲಿಕ್ ಮಾಡಿ

ಪದ್ಮ ಅನಾಥಶ್ರಮದ ವ್ಯವಸ್ತಾಪಕ ಪ್ರಬಾಕರ್ ಹಾಗೂ ಗಿನ್ನಿಸ್ ವಲ್ಡ್ ರೆಕಾರ್ಡ್ ಕವನಶ್ರೀ, ಯೋಧ ಸ್ಮರಣೆ ಶ್ರೀ ಮಂಜುನಾಥ್ ಜೆ. ಸಂಕೂರು ಅವರಿಗೆ ಸನ್ಮಾನಿಸಲಿದ್ದಾರೆ. ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತೀಕ ಕಾರ್ಯಕ್ರಮ ನಡೆಯಲಿದೆ.

ವಿವಿಧ ಆಟೋಟಗಳು ಈ ಬಾರೀ ಮಕ್ಕಳಿಗಾಗಿ ರ‍್ಯಾಂಬೋ ಅಮ್ಯೂಸ್‌ನವರಿಂದ ರೋಮಾಂಚಕಾರಿ ಮೈ ಜುಂ ಎನ್ನುವ ಜಾಯಿಂಟ್‌ವೀಲ್, ಕೋಲಂಬಸ್, ಬ್ರೇಕ್ ಡ್ಯಾಸ್ಸ್, ಮಾರುತಿ ಡೂಮ್, ಮಕ್ಕಳ ರೈಲು ಮ್ಯಾಜಕ್ ಷೋ ಡಾಗ್ ಷೋ ಹಾಗೂ ಇನ್ನೂ ಹತ್ತು ಹಲವಾರು ರೀತಿ ವಿಶೇಷ ಮನರಂಜನೆ ಕಾರ್ಯಕ್ರಮಗಳು ನಡೆಯಲಿವೆ.

Leave a Comment