ಹೊಸನಗರ: ಜನವರಿ 26
ಇಲ್ಲಿನ ಜೆಸಿಐ ಹೊಸನಗರ ಕೊಡಚಾದ್ರಿ ಹಾಗೂ ಇತರೆ ಸಂಘಸಂಸ್ಥೆಗಳ ಆಶ್ರಯದಲ್ಲಿ ಗಣರಾಜ್ಯೋತ್ಸವ ದಿನದಂದು ಸರ್ಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಮ್ಮಿಕೊಂಡಿದ್ದ ರಕ್ತದಾನ ಶಿಬಿರದಲ್ಲಿ ಸಾರ್ವಜನಿಕರಿಂದ ಸುಮಾರು 43 ಯೂನಿಟ್ ರಕ್ತ ಸಂಗ್ರಹ ಮಾಡಲಾಯಿತು.

ಈ ವೇಳೆ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಲಿಂಗರಾಜ್ ಮಾತನಾಡಿ, ತುರ್ತು ಸಂದರ್ಭದಲ್ಲಿ ರಕ್ತದಾನ ಅಗತ್ಯವಿರುವವರಿಗೆ ಜೀವ ರಕ್ಷಿಸುವ ಮಹತ್ವದ ಪಾತ್ರ ವಹಿಸುತ್ತದೆ. ಆದ್ದರಿಂದ ಪ್ರತಿಯೊಬ್ಬರೂ ವರ್ಷದಲ್ಲಿ ಕನಿಷ್ಠ ಎರಡು ಬಾರಿ ರಕ್ತದಾನ ಮಾಡಬೇಕು ಎಂದು ರಕ್ತದಾನದ ಮಹತ್ವವನ್ನು ವಿವರಿಸಿದರು.


ಕಾರ್ಯಕ್ರಮದಲ್ಲಿ ಜೆಸಿಐ ಅಧ್ಯಕ್ಷ ಜೆಸಿ ಸಂತೋಷ್ ಶೇಟ್, ವರ್ತಕರ ಸಂಘದ ಅಧ್ಯಕ್ಷ ಜೆಸಿ ಪೂರ್ಣೇಶ್ ಮಲೆಬೈಲು, ಜೆಸಿಐ ಲೀಡರ್ಸ್ ಜೆಸಿ ಸುರೇಶ್ ಬಿ.ಎಸ್., ಜೆಸಿ ಪ್ರದೀಪ ಕೆ.ಆರ್., ಜೆಸಿ ಕಾರ್ತಿಕ್ ಟಿ.ವಿ., ಜೆಸಿ ಕೇಶವ್, ಜೆಸಿ ರಾಧಾಕೃಷ್ಣ, ಜೆಸಿ ಸುಜಾತಾ, ಜೆಸಿ ಶೈಲಾ, ಜೆಸಿ ಜ್ಯೋತಿ ಪೂರ್ಣೇಶ್, ಜೆಸಿ ಗುರುಚರಣ್ ಎರಗಿ ಹಾಗೂ ಮೆಗ್ಗಾನ್ ಆಸ್ಪತ್ರೆಯ ಸಿಬ್ಬಂದಿ ಸೇರಿದಂತೆ ಇತರರು ಪಾಲ್ಗೊಂಡಿದ್ದರು.








