110 ಕೆವಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆಗ್ರಹ..
ಹೊಸನಗರ ತಾಲೂಕು ಸಹಕಾರಿ ಒಕ್ಕೂಟದಿಂದ ಬೃಹತ್ ಮೆರವಣಿಗೆಗೆ ಕರೆ…

Photo of author

By vishwachetana807@gmail.com

ಹೊಸನಗರ: ನಿರಂತರ ವಿದ್ಯುತ್ ಸಮಸ್ಯೆಗೆ ಗುರಿಯಾಗಿರುವ ಹೊಸನಗರ ತಾಲೂಕಿನಲ್ಲಿ 110 ಕಿವಿ ವಿದ್ಯುತ್ ಸ್ಥಾವರ ಸ್ಥಾಪನೆಗೆ ಆಗ್ರಹಿಸಿ ಏಪ್ರಿಲ್ 4ರ ಶನಿವಾರ ಬೆಳಿಗ್ಗೆ 10.30 ಕ್ಕೆ ಮಾವಿನಕೊಪ್ಪದಿಂದ ತಾಲೂಕು ಕಚೇರಿಯವರಿಗೆ ಬೃಹತ್ ಮೆರವಣಿಗೆ ಹಾಗೂ ತಾಲೂಕು ದಂಡಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿಯನ್ನು ಸಲ್ಲಿಸುವ ಶಾಂತಿಯುತ ಪ್ರತಿಭಟನಾ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿಲ್ಲಾ ಸಹಕಾರಿ ಯೂನಿಯನ್ ನಿರ್ದೇಶಕರಾದ ವಾಟಗೋಡು ಸುರೇಶ್ ತಿಳಿಸಿದರು.

ಈ ಕುರಿತಾಗಿ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು
ಅನೇಕ ವಿದ್ಯುತ್ ಯೋಜನೆಗಳಿಗೆ ಹೊಸನಗರ ತಾಲೂಕಿನ ಅನೇಕ ಗ್ರಾಮಗಳು ಮುಳುಗಡೆಯಾಗಿ ಜಮೀನನ್ನ ಕಳೆದುಕೊಂಡಿದ್ದು ಇತಿಹಾಸವಾದರೆ ಇಷ್ಟೆಲ್ಲ ತ್ಯಾಗವನ್ನು ಮಾಡಿದ ತಾಲೂಕು ಇನ್ನೂ ಕೂಡ ಕತ್ತಲೆಯಲ್ಲೇ ಇರುವ ವಾಸ್ತವ ಸ್ಥಿತಿಯಾಗಿದೆ ಇದರಿಂದಾಗಿ ವಿದ್ಯಾರ್ಥಿಗಳಿಗೆ ಉದ್ಯಮಿದಾರರಿಗೆ ರೈತರಿಗೆ ಸಾರ್ವಜನಿಕರಿಗೆ ಬಹಳಷ್ಟು ತೊಂದರೆಯಾಗಿದ್ದು ಈ ಕುರಿತಾಗಿ ತಾಲೂಕಿನ ನಾನಾ ಭಾಗಗಳಲ್ಲಿ ಬಹಳಷ್ಟು ಹೋರಾಟಗಳು ನಡೆದಿವೆ ಆದರೆ ಅದು ಯಾವುದು ತಾಲೂಕಿಗೆ ಫಲವನ್ನು ನೀಡಿಲ್ಲ ಇದರಂತೆಯೇ ಹರಿದ್ರಾವತಿಯಲ್ಲಿ 33 ಕೆವಿ ದ್ಯುತ್ ಸಬ್ ಸ್ಟೇಷನ್ ನಿರ್ಮಾಣಕ್ಕಾಗಿ ನಾವು ಕಳೆದ ಏಳು ವರ್ಷಗಳಿಂದ ನಿರಂತರ ಹೋರಾಟವನ್ನು ಮಾಡಿ ಇದೀಗ ಅದನ್ನು ಪಡೆದುಕೊಂಡಿದ್ದೇವೆ ಈ ನಿಟ್ಟಿನಲ್ಲಿ ಹೊಸನಗರ ತಾಲೂಕಿಗೆ ಶೀಘ್ರವಾಗಿ 110 ವಿದ್ಯುತ್ ಸ್ಥಾವರ ನಿರ್ಮಾಣವಾಗಬೇಕು ಅದಕ್ಕಾಗಿ ಇದೊಂದು ಸಾಂಕೇತಿಕ ಪ್ರತಿಭಟನೆಯಾಗಿದ್ದು ನಮ್ಮ ಬೇಡಿಕೆ ಶೀಘ್ರವಾಗಿ ಈಡೇರದಿದ್ದಲ್ಲಿ ಮುಂದಿನ ದಿನಗಳಲ್ಲಿ ಈ ಕುರಿತಾಗಿ ಉಗ್ರವಾದ ಹೋರಾಟವನ್ನು ಮಾಡಲು ತಾಲೂಕಿನ ಪ್ರತಿಯೊಬ್ಬರು ಪಕ್ಷಾತೀತವಾಗಿ ಜಾತ್ಯಾತೀತವಾಗಿ ಒಗ್ಗೂಡಿ ಪ್ರತಿಭಟಿಸಲಿದ್ದೇವೆ ಎಂದು ತಿಳಿಸಿದರು.
ಬಳಿಕ ಮಾತನಾಡಿದ ಕಳೂರು ಪಿಎಸಿಎಸ್ ಅಧ್ಯಕ್ಷರಾದ ಡಿ ಆರ್ ವಿನಯ್ ಕುಮಾರ್ ಕಳೆದ ನಾಲ್ಕೈದು ವರ್ಷಗಳಿಂದ ತಾಲೂಕಿನಲ್ಲಿ ವಿದ್ಯುತ್ ಸಮಸ್ಯೆ ಕುರಿತಾಗಿ ಹೋರಾಟಗಳು ಮನವಿಗಳು ನಿರಂತರವಾಗಿ ನಡೆಯುತ್ತಿದ್ದು ಯಾವುದೇ ಪ್ರಯೋಜನವಾಗಿಲ್ಲ ಹಾಗೆಯೇ 33 ಕೆವಿ ವಿದ್ಯುತ್ ನಿರ್ಮಾಣವಾಗಿ ಬಹಳಷ್ಟು ವರ್ಷಗಳೇ ಕಳೆದಿದೆ ಆದರೆ ಅದನ್ನು 110 ಕಿವಿ ವಿದ್ಯುತ್ ಸ್ಥಾವರವಾಗಿ ಪರಿವರ್ತಿಸುವ ಕೆಲಸ ಇವರಿಗೂ ನಡೆದಿಲ್ಲ ಪ್ರಸ್ತುತ ತಾಲೂಕಿನಲ್ಲಿ ಜನಸಂಖ್ಯೆ ಹೆಚ್ಚಳವಾಗಿದೆ ಕೃಷಿಕರು ಹೆಚ್ಚಾಗಿದ್ದಾರೆ ಶಿಕ್ಷಣ ಸಂಸ್ಥೆಗಳು ಹೆಚ್ಚಿದ್ದು ವಿದ್ಯಾರ್ಥಿಗಳು ಬಹಳಷ್ಟು ಇದ್ದಾರೆ ಉದ್ಯಮ ಬಹಳಷ್ಟು ಅಭಿವೃದ್ಧಿಯಾಗಿದೆ ತೋಟ ಹೊಲ ಗದ್ದೆಗಳು ಪ್ರಮಾಣ ಹೆಚ್ಚಾಗಿದೆ ಅದಕ್ಕೆ ಪಂಪ್ಸೆಟ್ ಗಳ ವ್ಯವಸ್ಥೆಯು ಸಹ ಅಷ್ಟೇ ಪ್ರಮಾಣದಲ್ಲಿ ಏರಿಕೆಯಾಗಿದೆ ಆದರೆ ವಿದ್ಯುತ್ ಸಮಸ್ಯೆ ಮಾತ್ರ ಹಿಂದೆ ಹೇಗಿತ್ತು ಇಂದಿಗೂ ಹಾಗೆ ಇದೆ ಆದ್ದರಿಂದ ತಾಲೂಕಿನ ಪ್ರತಿಯೊಬ್ಬರು ಈ ಒಂದು ಮೆರವಣಿಗೆಯಲ್ಲಿ ಪಕ್ಷಾತೀತವಾಗಿ ಜಾತ್ಯಾತೀತವಾಗಿ ಪಾಲ್ಗೊಂಡು ನಮ್ಮೂರಿನ ಬಹುದೊಡ್ಡ ಸಮಸ್ಯೆಗಳಲ್ಲಿ ಒಂದಾಗಿರುವ ವಿದ್ಯುತ್ ಸಮಸ್ಯೆಯನ್ನು ಪರಿಹರಿಸಿಕೊಳ್ಳಲು ಏಪ್ರಿಲ್ ನಾಲ್ಕರ ಬೆಳಗ್ಗೆ 10.30 ಕ್ಕೆ ಮಾವಿನ ಕೊಪ್ಪದಲ್ಲಿ ಆರಂಭವಾಗಲಿರುವ ಮೆರವಣಿಗೆಯಲ್ಲಿ ಪಾಲ್ಗೊಳ್ಳಬೇಕು ಎಂದು ಮನವಿಯನ್ನ ಮಾಡಿದರು ಈ ಸಂದರ್ಭದಲ್ಲಿ ಮೇಲಿನ ಬೇಸಿಗೆ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶ್ರೀನಿವಾಸ್ ರೆಡ್ಡಿ, ಎಂ ಗುಡ್ಡೆ ಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಪ್ರವೀಣ್ ಜಿಎನ್, ಕಳೂರು ಪಿಎಸಿಎಸ್ ನಿರ್ದೇಶಕರಾದ ಸುನಿಲ್ ಗುಬ್ಬಿಗ ಉಪಸ್ಥಿತರಿದ್ದರು.

ಬರಹ: Chetandas Hosamane

Leave a Comment