ಹೊಸನಗರ: ಒತ್ತಡದ ನಡುವೆ ಕಾರ್ಯ ನಿರ್ವಹಿಸುವ ಗೃಹ ರಕ್ಷಕದಳದ ಸಿಬ್ಬಂದಿಗಳ ಉಚಿತ ಆರೋಗ್ಯ ತಪಾಸಣೆ ಶಿಬಿರವು ಇಲ್ಲಿನ ತಾಲೂಕು ಕಚೇರಿ ಆವರಣದಲ್ಲಿ ಸೋಮವಾರ ನಡೆಯಿತು.
ಗೃಹ ರಕ್ಷಕ ಇಲಾಖೆ ಹಾಗು ಶಿವಮೊಗ್ಗದ ಎನ್.ಯು. ಕಿಡ್ನಿ ಆಸ್ಪತ್ರೆಯ ಸಹಯೋಗದಲ್ಲಿ ಆರೋಗ್ಯ ತಪಾಸಣೆ ಶಿಬಿರ ಹಮ್ಮಿಕೊಳ್ಳಲಾಗಿತ್ತು.

ಈ ವೇಳೆ ಆಸ್ಪತ್ರೆಯ ವೈದ್ಯಕೀಯ ವಿಭಾಗದ ಮೇಲ್ವಿಚಾರಕ ರವಿಕಿರಣ್ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಪ್ರತಿಯೊಬ್ಬ ವ್ಯಕ್ತಿಗೂ ಉತ್ತಮ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಅವಶ್ಯಕತೆ ಇದೆ. ಧ್ಯಾನ, ಯೋಗ, ಪ್ರಾಣಾಯಾಮ, ಸುತ್ತಮುತ್ತಲ ಜನರೊಂದಿಗೆ ಉತ್ತಮ ಬಾಂಧವ್ಯ, ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವ ಮೂಲಕ ಉತ್ತಮ ಆರೋಗ್ಯ ಹೊಂದಲು ಸಾಧ್ಯವಿದೆ ಎಂದರು.

ಇದೇ ಸಂದರ್ಭದಲ್ಲಿ ಗೃಹ ರಕ್ಷಕ ಪ್ಲಟೂನಿನ ಸುಮಾರು 25 ಸಿಬ್ಬಂದಿಗಳ ರಕ್ತದೊತ್ತಡ, ಸಕ್ಕರೆ ಅಂಶ, ತೂಕ, ಎಸ್ಪಿ2 ಪರೀಕ್ಷೆ ನಡೆಯಿತು.


ಗೃಹ ರಕ್ಷಕದಳದ ಸ್ಥಳ ಯುನಿಟ್ ಆಫಿಸರ್ ಟೀಕಪ್ಪ ಗೌಡ, ಆಸ್ಪತ್ರೆಯ ಶುಶ್ರೂಷಕಿ ರೇಖಾ ಎಂ. ಮಣ್ಣೂರ, ಸೇರಿದಂತೆ ಗೃಹ ರಕ್ಷಕ ಸಿಬ್ಬಂದಿಗಳಾದ ಅಶೋಕ, ರವಿ, ಮಹೇಶ್, ದೇವಪ್ಪ, ದಾಮೋದರ್, ಹೆಚ್.ಎಂ.ಸತೀಶ್ ಸೇರಿದಂತೆ ಹಲವರು ಶಿಬಿರದ ಪ್ರಯೋಜನ ಪಡೆದರು.








