ಹೊಸನಗರ: ಮಕರ ಸಂಕ್ರಾಂತಿ ಅಂಗವಾಗಿ ಶ್ರೀ ಲಕ್ಷ್ಮೀ ಜನಾರ್ಧನಸ್ವಾಮಿ ದೇವಸ್ಥಾನದಲ್ಲಿ ವಿಶೇಷ ಪೂಜೆ

Photo of author

By vishwachetana807@gmail.com

Sri Lakshmi Janardhanaswamy Devastana Hosanagara :

ಹೊಸನಗರ: ಪಟ್ಟಣದ ಮುಖ್ಯ ರಸ್ತೆಯಲ್ಲಿರುವ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ಜನಾರ್ಧನಸ್ವಾಮಿ ದೇವಸ್ಥಾನದಲ್ಲಿ ಮಕರ ಸಂಕ್ರಾಂತಿ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಸಂಪನ್ನಗೊಂಡವು.

ಬೆಳಿಗ್ಗೆ ದೇವಸ್ಥಾನದಲ್ಲಿ ಭಕ್ತರ ಕಲ್ಯಾಣಾರ್ಥವಾಗಿ ಪವಮಾನ ಸೂಕ್ತ ಪಾರಾಯಣ ನಡೆಯಿತು. ನಂತರ ಪಂಚಾಮೃತಾಭಿಷೇಕ ಹಾಗೂ ಪವಮಾನ ಕಲಶಾಭಿಷೇಕವನ್ನು ಶ್ರೀ ದೇವರಿಗೆ ಶ್ರದ್ಧಾಪೂರ್ವಕವಾಗಿ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಭಕ್ತರಿಂದ ಅಷ್ಟೋತ್ತರ ಶತಾಧಿಕ ಸಹಸ್ರನಾಮ ಪಾರಾಯಣವೂ ನಡೆಯಿತು.

ಉಚಿತವಾಗಿ ಸಂಕ್ರಾಂತಿ ಹಬ್ಬದ ಶುಭಾಶಯಗಳು ಪೋಸ್ಟರ್ ಮಾಡಿಕೊಳ್ಳಿ👇👇

ಮಧ್ಯಾಹ್ನ ಮಹಾಮಂಗಳಾರತಿ ನೆರವೇರಿಸಿ ಭಕ್ತರಿಗೆ ತೀರ್ಥ-ಪ್ರಸಾದ ವಿತರಿಸಲಾಯಿತು. ಸಂಜೆ ವೇಳೆಗೆ ವಿಷ್ಣು ಸಹಸ್ರನಾಮ ಪಾರಾಯಣ, ಭಜನೆ ಹಾಗೂ ಮಹಾಮಂಗಳಾರತಿ ನೆರೆವೇರಲಿದೆ . ರಾತ್ರಿ ತೀರ್ಥ-ಪ್ರಸಾದ ವಿತರಣೆಯೊಂದಿಗೆ ದಿನಪೂರ್ತಿ ಪೂಜಾ ಕಾರ್ಯಕ್ರಮಗಳು ಜರುಗಲಿವೆ.

ಈ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಹೊಸನಗರ ಹಾಗೂ ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು  ಈಗಾಗಲೇ ದರ್ಶನ ಪಡೆದುಕೊಂಡಿದ್ದಾರೆ. ದೇವಸ್ಥಾನದ ಅಧ್ಯಕ್ಷರು ಮತ್ತು ಸದಸ್ಯರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದ ಎಲ್ಲ ಭಕ್ತರಿಗೆ ಕೃತಜ್ಞತೆ ಸಲ್ಲಿಸಿದರು

ಸಂಜೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಭಕ್ತಿಭಾವದಿಂದ ಜರುಗಲಿವೆ.
ಸಂಜೆ 4.30ರಿಂದ ವಿಷ್ಣು ಸಹಸ್ರನಾಮ ಪಾರಾಯಣ,
ಸಂಜೆ 6.30ರಿಂದ ಭಜನೆ ಕಾರ್ಯಕ್ರಮ,
ಸಂಜೆ 7.30ಕ್ಕೆ ಮಹಾಮಂಗಳಾರತಿ,
ರಾತ್ರಿ 8.00ಕ್ಕೆ ತೀರ್ಥ–ಪ್ರಸಾದ ವಿತರಣೆ ನಡೆಯಲಿದೆ.
ಈ ಎಲ್ಲಾ ಕಾರ್ಯಕ್ರಮಗಳಿಗೆ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಆಯೋಜಕರು ಮನವಿ ಮಾಡಿದ್ದಾರೆ.

Leave a Comment