ಮಲ್ನಾಡ್ ಟ್ರೋಫಿ ಸೀಸನ್–2 : 2026ಕ್ಕೆ ಹೊಸನಗರ ಸಾಕ್ಷಿ
ಹೊಸನಗರ | 2026
ಹೊಸನಗರ ಗೆಳೆಯರ ಬಳಗ ಇವರ ಆಶ್ರಯದಲ್ಲಿ ಲೀಗ್ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿ – ಮಲ್ನಾಡ್ ಟ್ರೋಫಿ ಸೀಸನ್–2 : 2026 ಅನ್ನು ಹೊಸನಗರದ ನೆಹರು ಕ್ರೀಡಾಂಗಣದಲ್ಲಿ ಅದ್ಧೂರಿಯಾಗಿ ಆಯೋಜಿಸಲಾಗಿತ್ತು. ಗ್ರಾಮೀಣ ಮಟ್ಟದ ಕ್ರೀಡೆಗೆ ಉತ್ತೇಜನ ನೀಡುವ ಉದ್ದೇಶದಿಂದ ಆಯೋಜಿಸಿದ ಈ ಪಂದ್ಯಾವಳಿ ಕ್ರೀಡಾಭಿಮಾನಿಗಳ ಅಪಾರ ಬೆಂಬಲದೊಂದಿಗೆ ಯಶಸ್ವಿಯಾಗಿ ನೆರವೇರಿತು.

ಗಣ್ಯರಿಂದ ಕಬ್ಬಡಿ ಪಂದ್ಯಾವಳಿಗೆ ಉದ್ಘಾಟನೆ
ಈ ಕ್ರೀಡಾಕೂಟವನ್ನು
ಮಹೇಂದ್ರ ಉದ್ಯಮಿಗಳು, ಬೆಂಗಳೂರು,
ಎಂ. ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ ಜಿ.ಎನ್. ,ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷ ಹಾಲಗದ್ದೆ ಉಮೇಶ್,ಪ್ರೊ ಕಬಡ್ಡಿ ಖ್ಯಾತಿಯ ಗಗನ್ ಗೌಡ, ಪೂರ್ಣೇಶ್ ಮಲೆಬೈಲು, ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಾಸ್ತಿ ಕಟ್ಟೆ ಸುಬ್ರಹ್ಮಣ್ಯ, ಮಾಜಿ ತಾಲೂಕ ಪಂಚಾಯತ್ ಸದಸ್ಯಬಿಜಿ ಚಂದ್ರಮೌಳಿ ಗೌಡ,ಸರ್ಕಲ್ ಇನ್ಸ್ಪೆಕ್ಟರ್ ಗೌಡಪ್ಪ ಗೌಡರ್
ಶಾಸಕರ ಅನುಪಸ್ಥಿತಿಯಲ್ಲಿ ಸಣ್ಣಕ್ಕಿ ಮಂಜು ಆಪ್ತ ಸಹಾಯಕರು,ವಿನಯ್ ಕುಮಾರ್ ಧುಮ್ಮ
ಹಾಗೂ ಹೊಸನಗರ ಗೆಳೆಯರ ಬಳಗ ಅಧ್ಯಕ್ಷ ಶರತ್ ಮೆಣಸೆ ಅವರು ಉದ್ಘಾಟಿಸಿದರು.

ಮುಂದಿನ ದಿನಗಳಲ್ಲೂ ಸಂಪೂರ್ಣ ಸಹಕಾರ – ಮಹೇಂದ್ರ ಉದ್ಯಮಿಗಳು, ಬೆಂಗಳೂರು
ಪ್ರಮುಖವಾಗಿ ಅತಿ ಹೆಚ್ಚು ಸಹಕಾರ ನೀಡಿದ ಮಹೇಂದ್ರ ಉದ್ಯಮಿಗಳು, ಬೆಂಗಳೂರು ಅವರು ಮಾತನಾಡಿ,
“ಹೊಸನಗರ ಗೆಳೆಯರ ಬಳಗ ಗ್ರಾಮೀಣ ಮಟ್ಟದಲ್ಲಿ ಕ್ರೀಡೆಗೆ ಉತ್ತೇಜನ ನೀಡುತ್ತಿರುವುದು ಶ್ಲಾಘನೀಯ. ಮುಂದಿನ ದಿನಗಳಲ್ಲಿ ಹೊಸನಗರ ಗೆಳೆಯರ ಬಳಗ ಆಯೋಜಿಸುವ ಎಲ್ಲಾ ಕ್ರೀಡಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಸಹಕಾರವನ್ನು ನೀಡಲಾಗುವುದು” ಎಂದು ಘೋಷಿಸಿದರು.
ಜೊತೆಗೆ ಕಬ್ಬಡಿ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಆಟಗಾರರಿಗೆ ಶುಭ ಹಾರೈಸಿ, ಯುವಕರು ಕ್ರೀಡೆಯ ಮೂಲಕ ಶಿಸ್ತು, ಆತ್ಮವಿಶ್ವಾಸ ಮತ್ತು ಉತ್ತಮ ಆರೋಗ್ಯವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ವಿವಿಧ ಕ್ಷೇತ್ರದ ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ವಿವಿಧ ಕ್ರೀಡಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ಕ್ರೀಡಾಪಟುಗಳು ಹಾಗೂ ಶಿಕ್ಷಕರಿಗೆ ಸನ್ಮಾನಿಸಲಾಯಿತು.


“ಕಬ್ಬಡಿ ಪಂದ್ಯಾವಳಿ ಆಯೋಜನೆ ಸುಲಭವಲ್ಲ” – ಮಾಸ್ತಿ ಕಟ್ಟೆ ಸುಬ್ರಹ್ಮಣ್ಯ
ಯುವ ಒಕ್ಕೂಟದ ಅಧ್ಯಕ್ಷರಾದ ಮಾಸ್ತಿ ಕಟ್ಟೆ ಸುಬ್ರಹ್ಮಣ್ಯ ಅವರು ಮಾತನಾಡಿ,
“ಕಬ್ಬಡಿ ಪಂದ್ಯಾವಳಿ ಆಯೋಜನೆ ಮಾಡುವುದು ಅಷ್ಟು ಸುಲಭದ ಮಾತಲ್ಲ. ತಿಂಗಳಗಟ್ಟಲೆ ಶ್ರಮವಹಿಸಿ ಹೊಸನಗರ ಗೆಳೆಯರ ಬಳಗ ಶಿಸ್ತುಬದ್ಧ ಹಾಗೂ ಯಶಸ್ವಿ ಪಂದ್ಯಾವಳಿ ಆಯೋಜಿಸಿರುವುದು ಶ್ಲಾಘನೀಯ” ಎಂದು ಹೇಳಿದರು. ಕ್ರೀಡಾಪಟುಗಳು ಹಾಗೂ ಆಯೋಜಕರಿಗೆ ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಶಾಸಕರ ಪರವಾಗಿ ಮಾತನಾಡಿದ ವಿನಯ್ ಕುಮಾರ್ ಧುಮ್ಮ ಅವರು,
ಮಾನ್ಯ ಶಾಸಕರು ಅನಿವಾರ್ಯ ಕಾರಣಗಳಿಂದ ಕಾರ್ಯಕ್ರಮಕ್ಕೆ ಆಗಮಿಸಲು ಸಾಧ್ಯವಾಗಿಲ್ಲ. ಅವರ ಪ್ರತಿನಿಧಿಯಾಗಿ ಆಪ್ತ ಸಹಾಯಕ ಸಣ್ಣಕ್ಕಿ ಮಂಜು ಹಾಗೂ ಇನ್ನಿತರ ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೇವೆ ಎಂದು ತಿಳಿಸಿದರು.
ಶಾಸಕರು ಸದಾ ಕ್ರೀಡಾಪ್ರಿಯರು ಹಾಗೂ ಕ್ರೀಡಾ ಚಟುವಟಿಕೆಗಳಿಗೆ ಬೆಂಬಲ ನೀಡುವ ಸಹಕಾರಿಗಳಾಗಿದ್ದು, ಮುಂದಿನ ದಿನಗಳಲ್ಲಿ ಹೊಸನಗರ ಗೆಳೆಯರ ಬಳಗ ಆಯೋಜಿಸುವ ಕ್ರೀಡಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಸಹಕಾರವನ್ನು ನೀಡಲಿದ್ದಾರೆ ಎಂದು ಭರವಸೆ ನೀಡಿದರು.

“ಹೊಸನಗರದ ಕ್ರೀಡಾಪಟುಗಳನ್ನು ಉನ್ನತ ಮಟ್ಟಕ್ಕೆ ತರಬೇಕಿದೆ” – ಶ್ರೀ ಸುರೇಶ್
ಸನ್ಮಾನಿತರಾದ ಶ್ರೀ ಸುರೇಶ್, ದೈಹಿಕ ಶಿಕ್ಷಕರು, ಮಲೆನಾಡು ಪ್ರೌಢಶಾಲೆ, ಹೊಸನಗರ ಅವರು ಮಾತನಾಡಿ,
ಹೊಸನಗರದಲ್ಲಿ ಕಬ್ಬಡಿ ಮಾತ್ರವಲ್ಲದೆ ವಿವಿಧ ಕ್ರೀಡಾ ವಿಭಾಗಗಳಲ್ಲಿ ಪ್ರತಿಭಾವಂತ ಕ್ರೀಡಾಪಟುಗಳು ಇದ್ದು, ಅವರಿಗೆ ಸೂಕ್ತ ತರಬೇತಿ ನೀಡಿ ಜಿಲ್ಲಾ, ರಾಜ್ಯ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಹೊರಹೊಮ್ಮಿಸುವ ಪಣ ತೊಡಬೇಕಾಗಿದೆ. ಇದರಿಂದ ಹೊಸನಗರದ ಕೀರ್ತಿ ಇನ್ನಷ್ಟು ಹೆಚ್ಚಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಹಾಗೂ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಕೋರಿದರು.

ಕಾರ್ಯಕ್ರಮ ನಿರ್ವಹಣೆ
ಪ್ರಾಸ್ತಾವಿಕ ನುಡಿ: ಮಲೆನಾಡು ಶಾಲೆಯ ಶಿಕ್ಷಕರಾದ ಚಂದ್ರಶೇಖರ್
ನಿರೂಪಣೆ: ಶಿಕ್ಷಕಿ ವಿದ್ಯಾಶ್ರೀ
ಸ್ವಾಗತ ಭಾಷಣ: ನಾಗರಾಜ್, ಗುರುಜೀ ಇಂಟರ್ನ್ಯಾಷನಲ್ ಸ್ಕೂಲ್ ದೈಹಿಕ ಶಿಕ್ಷಕರು
ಪಂದ್ಯಾವಳಿಯು ಕ್ರೀಡಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿ ಯಶಸ್ವಿಯಾಗಿ ನೆರವೇರಿತು.







