ನೂತನವಾಗಿ ನಿರ್ಮಿಸಲಾದ ಮೇಲ್ಚಾವಣಿ ಉದ್ಘಾಟಿಸಿದ – ಬೇಳೂರು
ಹೊಸನಗರ: ಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವದಲ್ಲಿ ಸಾಗರ – ಹೊಸನಗರ ಕ್ಷೇತ್ರದ ಶಾಸಕ ಹಾಗೂ ರಾಜ್ಯ ಅರಣ್ಯ ಕೈಗಾರಿಕಾ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಶಾಸಕ ಗೋಪಾಲಕೃಷ್ಣ ಬೇಳೂರು ಪಾಲ್ಗೊಂಡು ದೇವಿಯ ದರುಶನ ಪಡೆದರು.

ಇದೇ ವೇಳೆ ಹಬ್ಬದ ಸಡಗರದಲ್ಲಿ ಗ್ರಾಮಸ್ಥರೊಂದಿಗೆ ಬೆರೆತು, ತಾಯಿಗೆ ವಿಶೇಷ ಪೂಜೆ ಸಲ್ಲಿಸಿ, ಕ್ಷೇತ್ರದ ಒಳಿತಿಗಾಗಿ ಪ್ರಾರ್ಥಿಸಿದರು. ತಾಯಿಯ ಕೃಪೆ ಎಲ್ಲರ ಮೇಲಿರಲಿ ಎಂಬ ಆರೈಕೆ ವ್ಯಕ್ತಪಡಿಸಿದರು.

ಈ ವೇಳೆ ದೇವಸ್ಥಾನದಲ್ಲಿ ನೂತನವಾಗಿ ನಿರ್ಮಿಸಲಾದ ಮೇಲ್ಚಾವಣಿ ಉದ್ಘಾಟಿಸಿ, ಜಾತ್ರಾ ಸಮಿತಿ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದ ಅವರು, ಶ್ರೀ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಅತ್ಯಂತ ಶಿಸ್ತು ಮತ್ತು ಸುವ್ಯವಸ್ಥಿತ ರೀತಿಯಲ್ಲಿ ಆಯೋಜಿಸಿಲಾಗಿದ್ದು, ಜಾತ್ರಾ ಸಮಿತಿ ಹಾಗೂ ಗ್ರಾಮಸ್ಥರನ್ನು ಹೃತ್ಪೂರ್ವಕವಾಗಿ ಅಭಿನಂದಿಸುತ್ತೇನೆ.


ಭಕ್ತರು ಸುಗಮವಾಗಿ ದೇವಿಯ ದರ್ಶನ ಪಡೆಯಲು, ಶಾಂತಿಯುತವಾಗಿ ಭಾಗವಹಿಸಲು ಸಮಿತಿ ಕೈಗೊಂಡ ವ್ಯವಸ್ಥೆಗಳು ಶ್ಲಾಘನೀಯವಾಗಿವೆ. ಎಂದರು.
ಮುಂದಿನ ದಿನಗಳಲ್ಲೂ ರಾಜ್ಯ ಸರಕಾರದ ಸಹಕಾರ ಇರುತ್ತದೆ ಎಂದರು.

ಈ ಕಾರ್ಯಕ್ರಮವನ್ನ ಜಾತ್ರ ಸಮಿತಿ ಅಧ್ಯಕ್ಷರಾದ ದತ್ತಾತ್ರೇಯ ಎಚ್ ಎಲ್, ಕಾರ್ಯದರ್ಶಿ, ಸುನಿಲ್ ಕುಮಾರ್, ಸಮಿತಿಯ ಸದಸ್ಯರಾದ ಮನೋಹರ್, ಗಿರೀಶ್ ರಾವ್, ನಿತ್ಯಾನಂದ, ಗ್ಯಾರಂಟೀ ಅನುಷ್ಠಾನ ಸಮಿತಿ ಅಧ್ಯಕ್ಷ ಚಿದಂಬರ , ಪಕ್ಷದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಬಿ.ಜಿ. ಚಂದ್ರಮೌಳಿ ಗೌಡ, ಇಂದೂಧರ ಗೌಡ, ಆಪ್ತ ಸಹಾಯಕ ಮಂಜು ಸಣ್ಣಕ್ಕಿ, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಸದಾಶಿವ ಶ್ರೇಷ್ಠಿ, ಪ್ರಮುಖರಾದ ಎರಗಿ ಉಮೇಶ್, ಎಂ.ಗುಡ್ಡೆಕೊಪ್ಪ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಜಿ.ಎನ್., ಪ್ರವೀಣ್ ಲೋಕೇಶ್, ಸಾಧಿಕ್ ಕಚ್ಚಿಗೆಬೈಲ್, ನಾಸಿರ್, ಗ್ರಾಮ ಪಂಚಾಯಿತಿ ಸದಸ್ಯ ಮಹೇಂದ್ರ ಬಿ.ಎನ್. ಸೇರಿ ಹಲವು ಗ್ರಾಮಸ್ಥರು ಉಪಸ್ಥಿತರಿದ್ದರು.
ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡ ಶಾಸಕ ಬೇಳೂರು ಗೋಪಾಲಕೃಷ್ಣ.. ಸಭಿಕರೊಂದಿಗೆ ಬೆರೆತು…ಹರ್ಷ ವ್ಯಕ್ತ ಪಡಿಸಿದರು.









