Hosanagara: ಹೊಸನಗರ ಮಾರಿಗುಡಿ–ಮಾರಿಕಾಂಬ ಜಾತ್ರೆ: ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಹೆಚ್.ಎಲ್. ದತ್ತಾತ್ರೇಯ ಆಯ್ಕೆ

Photo of author

By vishwachetana807@gmail.com

ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಹೆಚ್.ಎಲ್. ದತ್ತಾತ್ರೇಯ ಅವಿರೋಧ ಆಯ್ಕೆ

ಹೊಸನಗರ: ಜನವರಿ 20ರಿಂದ 28ರವರೆಗೆ ನಡೆಯಲಿರುವ ಹೊಸನಗರದ ಪ್ರತಿಷ್ಠಿತ ದೇವಸ್ಥಾನಗಳಾದ ಮಾರಿಗುಡಿ ಜಾತ್ರೆ ಹಾಗೂ ಮಾರಿಕಾಂಬ ಜಾತ್ರೆಯ ಪೂರ್ವ ಸಿದ್ಧತೆಗಳು ಆರಂಭಗೊಂಡಿದ್ದು, ಮಾರಿಗುಡಿ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಹೆಚ್.ಎಲ್. ದತ್ತಾತ್ರೇಯ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ.

ಹೊಸನಗರದ ದ್ಯಾವರ್ಸದಲ್ಲಿರುವ, ಮಾರಿಯಮ್ಮನವರ ತಾಯಿ ಮನೆ ಎಂದೇ ಪ್ರಸಿದ್ಧಿಯಾದ ದುರ್ಗಾಂಬ ದೇವಸ್ಥಾನದ ಆವರಣದಲ್ಲಿ ಎರಡು ದೇವಸ್ಥಾನ ಸಮಿತಿಗಳ ಸಂಯುಕ್ತ ಸಭೆ ನಡೆಯಿತು. ಈ ಸಭೆಯಲ್ಲಿ ಸಮಿತಿ ಸದಸ್ಯರ ಏಕಮತದ ತೀರ್ಮಾನದ ಮೂಲಕ ಹೆಚ್.ಎಲ್. ದತ್ತಾತ್ರೇಯರನ್ನು ಅಧ್ಯಕ್ಷರಾಗಿ ಆಯ್ಕೆ ಮಾಡಲಾಯಿತು.

ಈ ಹಿಂದೆ ದೀರ್ಘಕಾಲ ಮಾರಿಕಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಹೆಚ್.ಎಲ್. ಲಕ್ಷ್ಮಿನಾರಾಯಣರಾವ್ ಅವರು ಇತ್ತೀಚೆಗೆ ನಿಧನರಾಗಿದ್ದರು. ಅವರ ಸೇವೆಯನ್ನು ಗೌರವಿಸಿ, ಅವರ ಪುತ್ರರಾದ ಹೆಚ್.ಎಲ್. ದತ್ತಾತ್ರೇಯರಿಗೆ ಈ ಜವಾಬ್ದಾರಿಯನ್ನು ವಹಿಸಲು ಸಮಿತಿ ನಿರ್ಧರಿಸಿದ್ದು,

ಅದರಂತೆ ಅವರು ಅವಿರೋಧವಾಗಿ ಆಯ್ಕೆಯಾದರು.
ಈ ಸಂದರ್ಭದಲ್ಲಿ ದುರ್ಗಾಂಬ ದೇವಸ್ಥಾನ ಸಮಿತಿಯ ಅಧ್ಯಕ್ಷ ಹೆಚ್.ಎನ್. ಶ್ರೀಪತಿರಾವ್, ಸಮಿತಿಯ ಹಿರಿಯರಾದ ಶ್ರೀನಿವಾಸ್ ಕಾಮತ್, ಪರಮೇಶ್ವರರಾವ್, ಪ್ರಬಾಕರ್, ಗಣಪತಿ–ಪಾರ್ವತಿ ಮಹೇಶ್ವರ ದೇವಸ್ಥಾನ ಸಮಿತಿಯ ಅಧ್ಯಕ್ಷ ಸದಾಶಿವ ಶ್ರೇಷ್ಟಿ, ಪಿ. ಮನೋಹರ, ದ್ಯಾವರ್ಸ ಸುಬ್ರಹ್ಮಣ್ಯ, ಎನ್. ದತ್ತಾತ್ರೇಯ ಉಡುಪ, ದೇವಸ್ಥಾನ ವ್ಯವಸ್ಥಾಪಕರಾದ ನಾಗರಾಜ್, ವಿಜಯಕುಮಾರ್, ಹೆಚ್.ಕೆ. ಗುರುರಾಜ್, ಹೆಚ್.ಎಸ್. ಗಿರೀಶ್, ಗೋಪಾಲ್, ವಾದಿರಾಜ್ ಭಟ್, ಟಿ.ಆರ್. ಸುನೀಲ್ ಕುಮಾರ್, ನಿತ್ಯಾನಂದ ಹೆಚ್.ಎಂ., ಗುತ್ತಿಗೆದಾರರಾದ ಮಹಾಬಲ, ಶ್ರೀಧರ ಸೇರಿದಂತೆ ಹಲವರು ಉಪಸ್ಥಿತರಿದ್ದರು.




1 thought on “Hosanagara: ಹೊಸನಗರ ಮಾರಿಗುಡಿ–ಮಾರಿಕಾಂಬ ಜಾತ್ರೆ: ದೇವಸ್ಥಾನ ಸಮಿತಿ ಅಧ್ಯಕ್ಷರಾಗಿ ಹೆಚ್.ಎಲ್. ದತ್ತಾತ್ರೇಯ ಆಯ್ಕೆ”

Leave a Comment