Hosanagara: ಹರತಾಳು: ಜಯಂತ್ (ಪಾಪು) ಅವರ ಹುಟ್ಟುಹಬ್ಬ ಅರ್ಥಪೂರ್ಣ ಆಚರಣೆ

Photo of author

By vishwachetana807@gmail.com

ಸಾಮಾಜಿಕ ಸೇವೆಯ ಮೂಲಕ ಜನ್ಮದಿನ ಆಚರಣೆ, ವೃದ್ಧರು ಮತ್ತು ಮಕ್ಕಳಿಗೆ ವಿಶೇಷ ಊಟ ವ್ಯವಸ್ಥೆ

ಹರತಾಳು ಗ್ರಾಮದ ಜಯಂತ್, ಎಲ್ಲರಿಗೂ ಪಾಪು ಎಂದೇ ಚಿರಪರಿಚಿತರು, ತಮ್ಮ ಹುಟ್ಟುಹಬ್ಬವನ್ನು ಆರೈಕೆ ನಿರಾಶ್ರಿತರ ಆಶ್ರಮದಲ್ಲಿ ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಅವರು ಆಶ್ರಮದಲ್ಲಿರುವ ವೃದ್ಧರು ಹಾಗೂ ಮಕ್ಕಳಿಗೆ ವಿಶೇಷವಾದ ಊಟವನ್ನು ನೀಡುವ ಮೂಲಕ ಜನ್ಮದಿನವನ್ನು ಮಾನವೀಯ ಸೇವೆಯೊಂದಿಗೆ ಆಚರಿಸಿದರು. ಈ ಸೇವಾ ಕಾರ್ಯಕ್ಕೆ ಸ್ಥಳೀಯರು ಹಾಗೂ ಆಶ್ರಮದ ಸಿಬ್ಬಂದಿ ಮೆಚ್ಚುಗೆ ವ್ಯಕ್ತಪಡಿಸಿದರು.

ಪಾಪು ಅವರು ಮಾಜಿ ಸಚಿವರು ಹಾಗೂ ರಾಜ್ಯ ಬಿಜೆಪಿ ಉಪಾಧ್ಯಕ್ಷರಾದ ಹರತಾಳು ಹಾಲಪ್ಪ ಅವರ ಕಾರು ಚಾಲಕರಾಗಿದ್ದು, ಸ್ವಂತ ತಮ್ಮನ ಮಗನಾಗಿದ್ದಾರೆ.

ಈ ಸಂದರ್ಭದಲ್ಲಿ ಆಶ್ರಮದ ಸ್ಥಾಪಕರಾದ ರಂಜಿತ್ ಶೆಟ್ಟಿ ಅವರು ಆಶ್ರಮದ ಎಲ್ಲರ ಪರವಾಗಿ ಪಾಪು ಅವರಿಗೆ ಶುಭಾಶಯಗಳನ್ನು ತಿಳಿಸಿದರು. ಜೊತೆಗೆ ಅವರಿಗೆ ಇನ್ನಷ್ಟು ಸಮಾಜಮುಖಿ ಕೆಲಸ ಮಾಡುವ ಅವಕಾಶ ಸಿಗಲಿ, ದೇವರ ಆಶೀರ್ವಾದ ಸದಾ ಅವರ ಮೇಲಿರಲಿ ಎಂದು ಹಾರೈಸಿದರು.

Leave a Comment