JCI Hosanagara : ಎಳ್ಳು-ಬೆಲ್ಲದೊಂದಿಗೆ ಸಂಭ್ರಮಿಸಿದ ಸಂಕ್ರಾಂತಿ ಸಂಜೆ – ಗೇರುಪುರ ವಸತಿ ಶಾಲೆಯಲ್ಲಿ JCI ಕಾರ್ಯಕ್ರಮ

Photo of author

By vishwachetana807@gmail.com

ಹೊಸನಗರ : ಹೊಸನಗರ ಕೊಡಚಾದ್ರಿಯಿಂದ ಗೇರುಪುರ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ಸಂಕ್ರಾಂತಿ ಸಂಜೆ ಆಚರಣೆJCI ಹೊಸನಗರ ಕೊಡಚಾದ್ರಿ ಸಂಸ್ಥೆಯಿಂದ ಪ್ರತಿವರ್ಷದಂತೆ ಈ ವರ್ಷವೂ ಗೇರುಪುರದ ಇಂದಿರಾ ಗಾಂಧಿ ವಸತಿ ಶಾಲೆಯಲ್ಲಿ ‘ಸಂಕ್ರಾಂತಿ ಸಂಜೆ’ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದ ಅಂಗವಾಗಿ ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಮ್ಯೂಸಿಕಲ್ ಚೇರ್ ಸೇರಿದಂತೆ ವಿವಿಧ ಮನರಂಜನಾ ಆಟೋಟ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಇದೇ ವೇಳೆ ಮಕ್ಕಳಿಗೆ ಎಳ್ಳು-ಬೆಲ್ಲ ನೀಡಿ ಸಂಕ್ರಾಂತಿ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ JCI ಹೊಸನಗರ ಕೊಡಚಾದ್ರಿ ಸಂಸ್ಥೆಯ ಅಧ್ಯಕ್ಷ Jc ಸಂತೋಷ್ ಶೇಟ್, ಸಂಕ್ರಾಂತಿ ಹಬ್ಬವು ನಮ್ಮ ಸಂಸ್ಕೃತಿ ಹಾಗೂ ಸಹಬಾಳ್ವೆಯ ಸಂಕೇತವಾಗಿದ್ದು, ವಸತಿ ಶಾಲೆಯ ಮಕ್ಕಳೊಂದಿಗೆ ಹಬ್ಬವನ್ನು ಆಚರಿಸುವುದರಿಂದ ಅವರಿಗೆ ಸಂತೋಷದ ಜೊತೆಗೆ ಆತ್ಮವಿಶ್ವಾಸವೂ ಹೆಚ್ಚುತ್ತದೆ ಎಂದು ತಿಳಿಸಿದರು. ಮುಂದಿನ ದಿನಗಳಲ್ಲಿಯೂ ಶಿಕ್ಷಣ, ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ JCI ಸದಾ ಬೆಂಬಲ ನೀಡಲಿದೆ ಎಂದರು.


JC ಪೂರ್ಣೇಶ್ ಮಲೆಬೈಲು ಅವರು ಮಕ್ಕಳನ್ನು ಉದ್ದೇಶಿಸಿ ಮಾತನಾಡಿ, ಸಂಕ್ರಾಂತಿ ಕಾಲವು ರೈತರಿಗೆ ಸುಗ್ಗಿಯ ಕಾಲವಾಗಿದ್ದು, ಸಂಕ್ರಾಂತಿ ಹಬ್ಬವನ್ನು ಮುಖ್ಯವಾಗಿ ರೈತರು ಆಚರಿಸುವ ಮಹತ್ವದ ಹಬ್ಬವಾಗಿದೆ ಎಂದು ಹೇಳಿದರು. ಹೊಸನಗರದ ಸಣ್ಣ ವಾತಾವರಣದಿಂದ ಹೊರಬಂದು ಇಂದು ವಿಶಾಲ ಹಾಗೂ ಸುಂದರ ವಾತಾವರಣದಲ್ಲಿ ನಾವು ಇದ್ದೇವೆ; ಇಲ್ಲಿ ಗಾಳಿ, ನೀರು ಎಲ್ಲವೂ ಅತ್ಯಂತ ಮನಮೋಹಕವಾಗಿವೆ ಎಂದರು. ಮಕ್ಕಳು ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡಿ ಹೆಚ್ಚು ಓದಿ, ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸದೊಂದಿಗೆ ಮುಂದುವರಿದು ತಮ್ಮ ತಂದೆ–ತಾಯಿಗೆ ಹಾಗೂ ನಮ್ಮ ದೇಶಕ್ಕೆ ಕೀರ್ತಿ ತರಬೇಕು ಎಂದು ಸಲಹೆ ನೀಡಿದರು. ಅಂತಿಮವಾಗಿ ಅವರು ಎಲ್ಲ ವಿದ್ಯಾರ್ಥಿಗಳಿಗೆ ಮಕರ ಸಂಕ್ರಾಂತಿ ಹಬ್ಬದ ಹಾರ್ದಿಕ ಶುಭಾಶಯಗಳನ್ನು ಕೋರಿದರು.

ಕಾರ್ಯಕ್ರಮದಲ್ಲಿ IPZP Jc ಸುರೇಶ್ ಬಿ.ಎಸ್, ಪೂರ್ವಾಧ್ಯಕ್ಷ Jc ವಿನಯ್ ಹೆಬ್ಬಾಯ್ಲ್, ಶಾಲಾ ಪ್ರಾಂಶುಪಾಲ ಚಂದ್ರಶೇಖರ್, JAC ರೀಜಿಯನ್ ಅಧ್ಯಕ್ಷ Jc ಹರೀಶ್ ಮಲೇಬೈಲ್, ಮಹಿಳಾ ಅಧ್ಯಕ್ಷೆ Jc ದಿವ್ಯಾ ಮಧು, PD Jc ಸುಜಾತಾ ಸುರೇಶ್, IPP Jc ಕಾರ್ತಿಕ್ ಟಿ.ವಿ, Jc ರಾಧಾಕೃಷ್ಣ, Jc ಕೇಶವ, Jc ಶೈಲಾ ಕೇಶವ್, Jc ಜ್ಯೋತಿ ಪೂರ್ಣೇಶ್, Jc ಗುರುಚರಣ್ ಎರಗಿ ಸೇರಿದಂತೆ JCI ಸಂಸ್ಥೆಯ ಪದಾಧಿಕಾರಿಗಳು, ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದರು.

“ಶಿಕ್ಷಣವೇ ಬದುಕಿನ ಬೆಳಕು; ಮಕ್ಕಳು ಶಿಸ್ತು, ಪರಿಶ್ರಮ ಮತ್ತು ಆತ್ಮವಿಶ್ವಾಸದೊಂದಿಗೆ ಮುಂದುವರಿದರೆ ಯಶಸ್ಸು ಖಚಿತ.” – JC ಪೂರ್ಣೇಶ್ ಮಲೆಬೈಲು

“ಸಂಕ್ರಾಂತಿ ಹಬ್ಬವು ರೈತರ ಸುಗ್ಗಿಯ ಸಂಭ್ರಮ; ಸಂಸ್ಕೃತಿ ಮತ್ತು ಸಹಬಾಳ್ವೆಯ ಮಹತ್ವವನ್ನು ಸಾರುವ ಹಬ್ಬ.” – JC ಸಂತೋಷ್ ಶೇಟ್

Leave a Comment