Hosanagara : ಹೊನಲು ಬೆಳಕಿನಲ್ಲಿ ಕಬಡ್ಡಿ ಕದನ: ಹೊಸನಗರದಲ್ಲಿ ಮಲ್ನಾಡ್ ಟ್ರೋಫಿ–2026|

Photo of author

By vishwachetana807@gmail.com

ಹೊಸನಗರ: ಗೆಳೆಯರ ಬಳಗ ಇದರ ಆಶ್ರಯದಲ್ಲಿ ಎರಡನೇ ಆವೃತ್ತಿ ಹೊಸನಗರ, ಸಾಗರ, ತೀರ್ಥಹಳ್ಳಿ ಯ ಆಯ್ದ ಕ್ರೀಡಾಪಟುಗಳು ಲೀಗ್ ಮಾದರಿಯ ಹೊನಲು ಬೆಳಕಿನ ಮ್ಯಾಟ್ ಕಬ್ಬಡಿ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.
ಜನವರಿ 10 ಶನಿವಾರದಂದು ಮಲ್ನಾಡ್ ಟ್ರೋಫಿ, 2026 ರನ್ನು ಸಂಜೆ 7ರಿಂದ ನೆಹರು ಕ್ರೀಡಾಂಗಣದಲ್ಲಿ ಅತ್ಯಂತ ಅದ್ದೂರಿಯಾಗಿ ನಡೆಯಲಿದೆ ಎಂದು ಮಲ್ನಾಡ್ ಟ್ರೋಫಿ ಆಯೋಜಕ ಅಧ್ಯಕ್ಷರಾದ ಶರತ್ ಮೆಣಸೆ ತಿಳಿಸಿದರು.

ಕಾರ್ಯದ ಬಗ್ಗೆ ಮಾತನಾಡಿ ಕಾರ್ಯಕ್ರಮದ ಉದ್ಘಾಟನೆಯನ್ನು ಕ್ಷೇತ್ರದ ಜನಪ್ರಿಯ ಶಾಸಕರಾದ ಗೋಪಾಲಕೃಷ್ಣ ಬೇಳೂರು ಉದ್ಘಾಟಿಸಲಿದ್ದು ಕಾರ್ಯಕ್ರಮದಲ್ಲಿ ಉದ್ಯಮಿಗಳಾದ ಮಹೇಂದ್ರ ಬೆಂಗಳೂರು ವಿಶೇಷ ಆಹ್ವಾನಿಕರಾಗಿ ಆಗಮಿಸಲಿದ್ದಾರೆ ಜೊತೆಗೆ ಕ್ಷೇತ್ರದ ವಿವಿಧ ಪಕ್ಷದ ಮುಖಂಡರುಗಳು ಉದ್ಯಮಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದು ಕ್ರೀಡಾಕೂಟದಲ್ಲಿ ಕಬ್ಬಡಿ ಕ್ರೀಡಾ ಪ್ರೋತ್ಸಾಹಕರ ಮಾಲೀಕತ್ವದ 10 ತಂಡಗಳು ಭಾಗವಹಿಸಲಿವೆ.


ಪ್ರಥಮ ಬಹುಮಾನ – ₹40,000
ದ್ವಿತೀಯ ಬಹುಮಾನ – ₹30,000
ತೃತೀಯ ಬಹುಮಾನ – ₹20,000
ಜೊತೆಗೆ ಆಕರ್ಷಕ ಟ್ರೋಫಿಗಳು ಮತ್ತು ಗೌರವಗಳು ನೀಡಲಾಗುತ್ತದೆ.


ಇದಲ್ಲದೆ, ವಿವಿಧ ಕ್ರೀಡಾ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಲಾಗುವುದು ಹಾಗೂ ವಿಭಿನ್ನ ಶಾಲಾ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮವೂ ಕಾರ್ಯಕ್ರಮದ ಭಾಗವಾಗಿರಲಿದೆ.

ಅಲ್ಲದೆ ಕಾರ್ಯಕ್ರಮದ ನೇರಪ್ರಸಾರದ ವ್ಯವಸ್ಥೆಯನ್ನು ಸಹ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಸದಸ್ಯರಾದ ಅಖಿಲೇಶ್ ಶೆಟ್ಟಿ ಅಭಿ ಪೂಜಾರಿ ಭರತ್ ಮೆಣಸೆ ಪ್ರಶಾಂತ್ ಆದಿತ್ಯ ಮುಂತಾದವರು ಉಪಸ್ಥಿತರಿದ್ದರು.

Leave a Comment