ದೇವಸ್ಥಾನ ಆವರಣದಲ್ಲಿ ಬೆಳಿಗ್ಗೆ 10 ರಿಂದ ವಿಶೇಷ ಸಮಾಜ ಸೇವಾ ಕಾರ್ಯಕ್ರಮಗಳು
ಹೊಸನಗರ: ತಾಲ್ಲೂಕಿನ ವಾರಂಬಳ್ಳಿ ಗ್ರಾಮದಲ್ಲಿರುವ ಶ್ರೀ ಕಲ್ಯಾಣೇಶ್ವರ ದೇವಸ್ಥಾನದ ಪುನರ್ ಪ್ರತಿಷ್ಠಾಪನೆಯ ನಾಲ್ಕನೇ ವರ್ಷದ ವಾರ್ಷಿಕೋತ್ಸವವು ಜನವರಿ 19ರಂದು ಧಾರ್ಮಿಕ ಹಾಗೂ ಸಮಾಜಮುಖಿ ಕಾರ್ಯಕ್ರಮಗಳೊಂದಿಗೆ ಅರ್ಥಪೂರ್ಣವಾಗಿ ನಡೆಯಲಿದೆ.
ಶ್ರೀ ಕಲ್ಯಾಣೇಶ್ವರ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್ ಆಶ್ರಯದಲ್ಲಿ ನಡೆಯುವ ಈ ವಾರ್ಷಿಕೋತ್ಸವದ ಭಾಗವಾಗಿ, ಸಮಾಜಕ್ಕೆ ಉಪಕಾರವಾಗುವ ಬೃಹತ್ ರಕ್ತದಾನ ಶಿಬಿರ ಹಾಗೂ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಬೆಳಿಗ್ಗೆ 10 ಗಂಟೆಯಿಂದ ದೇವಸ್ಥಾನ ಆವರಣದಲ್ಲಿ ಆಯೋಜಿಸಲಾಗಿದೆ.



ಇದೇ ಸಂದರ್ಭದಲ್ಲಿ, ಸಮಾಜದ ಸೇವೆಯಲ್ಲಿ ತೊಡಗಿಸಿಕೊಂಡು ಸದ್ದಿಲ್ಲದೆ ಕೆಲಸ ಮಾಡುತ್ತಿರುವ ಸಾಧಕರನ್ನು ಗೌರವಿಸುವ ಉದ್ದೇಶದಿಂದ ಪ್ರಥಮ ವರ್ಷದ ಶ್ರೀ ಕಲ್ಯಾಣೇಶ್ವರ ಸೇವಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿದೆ. ತ್ರಿಣಿವೆ ಸರ್ಕಾರಿ ವೈದ್ಯಾಧಿಕಾರಿ ಡಾ. ಪ್ರತಿಮಾ ಹಾಗೂ ಹೊಸನಗರದ ಗೋರಕ್ಷಕ ಶ್ರೀ ರಾಘವೇಂದ್ರ ಅವರಿಗೆ ಬೆಳಿಗ್ಗೆ 11:30ಕ್ಕೆ ಈ ಗೌರವ ಸಲ್ಲಿಸಲಾಗುತ್ತದೆ.

ಧರ್ಮ, ಸೇವೆ ಮತ್ತು ಸಮಾಜದ ಒಳಿತಿನ ಸಂದೇಶವನ್ನು ಹೊತ್ತುಕೊಂಡಿರುವ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಹಕರಿಸುವಂತೆ ದೇವಸ್ಥಾನ ಜೀರ್ಣೋದ್ಧಾರ ಟ್ರಸ್ಟ್‌ನ ಅಧ್ಯಕ್ಷರು ಮತ್ತು ಸದಸ್ಯರು ಸರ್ವ ಭಕ್ತಾದಿಗಳಿಗೆ ಮನವಿ ಮಾಡಿದ್ದಾರೆ.








1 thought on “ಕಲ್ಯಾಣೇಶ್ವರ ವಾರ್ಷಿಕೋತ್ಸವ: ಧಾರ್ಮಿಕ ಸಂಭ್ರಮದ ಜೊತೆ ಸಮಾಜ ಸೇವೆಯ ಸಂದೇಶ”