ಹೊಸನಗರ: ಇಲ್ಲಿನ ಕೊಡಚಾದ್ರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ 1985–88ನೇ ಸಾಲಿನ ಪ್ರಥಮ ಬ್ಯಾಚ್‌ನ ಕಲಾ ಹಾಗೂ ವಾಣಿಜ್ಯ ವಿಭಾಗದ ಹಳೇ ವಿದ್ಯಾರ್ಥಿಗಳು ಇತ್ತೀಚೆಗೆ ಕಾಲೇಜಿನಲ್ಲಿ ಆಯೋಜಿಸಿದ್ದ ಸ್ನೇಹ ಸಮ್ಮಿಲನ ಕಾರ್ಯಕ್ರಮದ ವೇಳೆ ತಾವು ವ್ಯಾಸಂಗ ಮಾಡಿದ ಕಾಲೇಜಿಗೆ ರೂ. 60 ಸಾವಿರ ಮೌಲ್ಯದ ನೂರು ಪ್ಲಾಸ್ಟಿಕ್ ಕುರ್ಚಿಗಳನ್ನು ಕೊಡುಗೆಯಾಗಿ ನೀಡಿದರು.



ಈ ಕುರ್ಚಿಗಳನ್ನು ಅಂದಿನ ಕಾಲೇಜು ಸ್ಥಾಪಕ ಅಧ್ಯಕ್ಷರಾಗಿದ್ದ 95 ವರ್ಷದ ಹಿರಿಯರು ಹಾಗೂ ಕ್ಷೇತ್ರದ ಮಾಜಿ ಶಾಸಕ ಬಿ. ಸ್ವಾಮಿರಾವ್ ಅವರ ಸಮ್ಮುಖದಲ್ಲಿ ಪ್ರಾಚಾರ್ಯ ಕೆ. ಉಮೇಶ್ ಅವರಿಗೆ ಹಸ್ತಾಂತರಿಸಲಾಯಿತು.

ಈ ಸಂದರ್ಭದಲ್ಲಿ ಅಂದಿನ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿ.ವಿ. ಚಂದ್ರಶೇಖರ ಸೇರಿದಂತೆ ಹಳೇ ವಿದ್ಯಾರ್ಥಿಗಳಾದ ಕೆ. ಇಲಿಯಾಸ್, ಮಂಡಾನಿ ಲೋಕೇಶ್ವರ, ಕಾರ್ಗಡಿ ಶಂಕರನಾರಾಯಣ, ಗುಳ್ಳೆಕೊಪ್ಪ ಅಣ್ಣಪ್ಪ, ಕುಂಬತ್ತಿ ಕೃಷ್ಣಮೂರ್ತಿ, ರಾಘುನಾಥ ರಾವ್, ಶ್ಯಾಮಲಾ, ಸುಜಾತ, ವಾಸುದೇವ ಆಚಾರ್ಯ, ವಾಸಂತಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.








