Shivamogga: ವೀರಶೈವ ಲಿಂಗಾಯತ ಪರಂಪರೆಯ ಮೌಲ್ಯಗಳು ಸಮಕಾಲೀನ ಸಮಾಜಕ್ಕೆ ದಾರಿ ದೀಪ – ಡಾ. ಶಂಭು ಬಳಿಗಾರ

Photo of author

By vishwachetana807@gmail.com

ಕುಮಾರವ್ಯಾಸ ರಂಗ ಮಂದಿರದಲ್ಲಿ ‘ಶಿವ ಸಂಕಲ್ಪ’ ವೀರಶೈವ ಲಿಂಗಾಯತ ಒಕ್ಕೂಟ ಉದ್ಘಾಟನೆ

ಶಿವಮೊಗ್ಗ: ನಗರದ ಕುವೆಂಪು ರಂಗ ಮಂದಿರದಲ್ಲಿ ‘ಶಿವ ಸಂಕಲ್ಪ’ ವೀರಶೈವ ಲಿಂಗಾಯತ ಒಕ್ಕೂಟದ ಉದ್ಘಾಟನಾ ಸಮಾರಂಭ ಭಕ್ತಿಭಾವ ಹಾಗೂ ವೈಚಾರಿಕತೆಯೊಂದಿಗೆ ನೆರವೇರಿತು. ದಿವ್ಯ ಸಾನಿಧ್ಯ ವಹಿಸಿದ್ದ ಶ್ರೀಶ್ರೀಶ್ರೀ ಜಗದ್ಗುರು ಗುರಸಿದ್ಧಿ ರಾಜಯೋಗೀಂದ್ರ ಸ್ವಾಮಿಗಳು ತಮ್ಮ ಆಶೀರ್ವಚನದ ಮೂಲಕ ವೀರಶೈವ ಲಿಂಗಾಯತ ಪರಂಪರೆಯ ಮೌಲ್ಯಗಳನ್ನು ಪಾಲಿಸಲು ಕರೆ ನೀಡಿದರು.

ವಿಶೇಷ ಉಪನ್ಯಾಸವನ್ನು ಜಾನಪದ ವಿದ್ವಾಂಸರಾದ ಡಾ. ಶಂಭು ಬಳಿಗಾರ ಅವರು ನೀಡಿದ್ದು, ವೀರಶೈವ ಲಿಂಗಾಯತ ಪರಂಪರೆಯ ಸಾಮಾಜಿಕ, ಸಾಂಸ್ಕೃತಿಕ ಹಾಗೂ ತತ್ವಶಾಸ್ತ್ರೀಯ ಮೌಲ್ಯಗಳನ್ನು ಸವಿಸ್ತಾರವಾಗಿ ವಿವರಿಸಿದರು. ಬಸವ ತತ್ವಗಳು ಮಾನವೀಯತೆ, ಸಮಾನತೆ, ಶ್ರಮದ ಗೌರವ ಹಾಗೂ ಸಾಮಾಜಿಕ ನ್ಯಾಯಕ್ಕೆ ನೀಡುವ ಮಹತ್ವವನ್ನು ವಿವರಿಸಿ, ಇಂದಿನ ಸಮಕಾಲೀನ ಸಮಾಜದಲ್ಲಿ ಈ ಮೌಲ್ಯಗಳ ಅಗತ್ಯತೆ ಮತ್ತಷ್ಟು ಹೆಚ್ಚಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಯುವಜನರಲ್ಲಿ ಸಂಸ್ಕೃತಿ, ಆತ್ಮಗೌರವ ಹಾಗೂ ವೈಚಾರಿಕ ಚಿಂತನೆ ಬೆಳೆಸುವಲ್ಲಿ ವೀರಶೈವ ಲಿಂಗಾಯತ ಪರಂಪರೆಯ ಪಾತ್ರ ಮಹತ್ವದಾಗಿದೆ ಎಂದು ಅವರು ಹೇಳಿದರು.

ಸಮಾರಂಭದಲ್ಲಿ ಕೆ.ಇ. ಕಾಂತೇಶ್, ವೇ. ಮಹಾಲಿಂಗಯ್ಯ ಶಾಸ್ತ್ರಿ, ಜ್ಯೋತಿ ಪ್ರಕಾಶ್, ಹೆಚ್. ವಿ. ಮಹೇಶ್ವರಪ್ಪ, ಸೋಮಶೇಖರ್, ಇ. ವಿಶ್ವಾಸ್, ಶ್ರೀಕಾಂತ್, ಲಿಂಗಮೂರ್ತಿ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು. ಕಾರ್ಯಕ್ರಮವು ಯಶಸ್ವಿಯಾಗಿ ಸಂಪನ್ನವಾಯಿತು.

Leave a Comment