ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಕಾರು ಅಪಘಾತ

Photo of author

By vishwachetana807@gmail.com

ಶಿವಮೊಗ್ಗ: ಸಂಸದ ಬಿ.ವೈ. ರಾಘವೇಂದ್ರ ಕಾರು ಅಪಘಾತದಿಂದ ತಪ್ಪಿದ ಘಟನೆ

ಶಿವಮೊಗ್ಗ ಜಿಲ್ಲಾ ಕುಂಚೇನಹಳ್ಳಿ ಗ್ರಾಮದಲ್ಲಿ ಸಂಸದ ಬಿ.ವೈ. ರಾಘವೇಂದ್ರ ಅವರು ನಿರೀಕ್ಷಿತ ದೊಡ್ಡ ಅಪಘಾತದಿಂದ ಅದೃಷ್ಟವಶಾತ್ ತಪ್ಪಿದರು. ಶಿಕಾರಿಪುರದಿಂದ ಶಿವಮೊಗ್ಗ ಕಡೆಗೆ ಬರುತ್ತಿದ್ದ ಸಂಸದರ ಕಾರಿಗೆ ಹಿಂಬದಿಯಿಂದ ಮತ್ತೊಂದು ವಾಹನ ಡಿಕ್ಕಿ ಹೊಡೆದಿದ್ದರಿಂದ ಘಟನೆ ಸಂಭವಿಸಿತು.

ಆಪಘಾತದ ನಂತರ ಪರಿಶೀಲನೆ ನಡೆಸಿದ ವರದಿ ಪ್ರಕಾರ, ಸಂಸದರು ಯಾವುದೇ ಗಾಯವಿಲ್ಲದೆ ಆರೋಗ್ಯವಾಗಿದ್ದಾರೆ. ಈ ದುರ್ಘಟನೆ ಸಮಯದಲ್ಲಿ ಯಾವುದೇ ಹೆಚ್ಚು ಹಾನಿ ಆಗಿಲ್ಲ, ಅವರು  ಘಟನೆಯ ಸಮಯದಲ್ಲಿ ಸಂಸದರು ಆರೋಗ್ಯವಾಗಿದ್ದಾರೆ  ಎಂದು ಇಲಾಖೆ ಮೂಲಗಳು ತಿಳಿಸಿದ್ದಾರೆ.

ಸ್ಥಳೀಯರು ಮತ್ತು ಪೊಲೀಸ್ ಇಲಾಖೆಯವರು ಕೂಡ ಘಟನೆಯ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಕಾರಿಗೆ ಹಾನಿಯಾಗಿದ್ದರಿಂದ ಸಂಸದ ಬಿವೈ ರಾಘವೇಂದ್ರ, ಇತರೆ ಸಿಬ್ಬಂದಿಗಳು ಮತ್ತೊಂದು ಕಾರಿನಲ್ಲಿ ತಮ್ಮ ಪ್ರಯಾಣ ಮುಂದುವರೆಸಿದರು

Leave a Comment