
ರಾಜ್ಯದ ಗಮನ ಸೆಳೆಯುತ್ತಿರುವ ಹೊಸನಗರ ತಾಲೂಕಿನ ಮಾರುತಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಸ. ಕಿ. ಪ್ರಾ. ಶಾಲೆ, ನೀರೇರಿಯಲ್ಲಿ ಸಮುದಾಯದತ್ತ ಶಾಲಾ ಕಾರ್ಯಕ್ರಮವನ್ನು ಅದ್ದೂರಿಯಾಗಿ ಜರುಗಿತು.
ಶ್ರೀ ಗಣಪತಿ ಮತ್ತು ಶ್ರೀ ಶಾರದಾಂಬೆಯ ಪೂಜೆಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ 2025-26 ನೇ ಸಾಲಿನ ಮಕ್ಕಳ ಫಲಿತಾಂಶ ಪ್ರಕಟಿಸಲಾಯಿತು.
ಪೋಷಕರೊಂದಿಗೆ ಈ ಸಾಲಿನ ಮಕ್ಕಳ ಪ್ರಗತಿ ಪರಿಶೀಲನೆ ನಡೆಸಲಾಯಿತು. ಮಕ್ಕಳು ತಾವು ಕಲಿತಿದ್ದನ್ನು ಪ್ರಸ್ತುತ ಪಡಿಸಿದ್ದನ್ನು ಕಂಡು ಎಲ್ಲರು ಮೆಚ್ಚುಗೆ ವ್ಯಕ್ತಪಡಿಸಿದರು.

ನಂತರ ಭಾರತೀಯ ಸಂಸ್ಕೃತಿಯoತೆ ಎಲ್ಲಾ ಮಕ್ಕಳು ಅವರ ತಂದೆ, ತಾಯಿಯ ಪಾದ ಪೂಜೆ ಮಾಡಿ ಆಶೀರ್ವಾದ ಪಡೆದ ಕ್ಷಣ ಇನ್ನಷ್ಟು ಕಳೆ ಕಟ್ಟಿತು. ಹಾಗೊ ಸುಮಾರು 30 ನಿಮಿಷಗಳ ಕಾಲ ನಡೆದ ಮಕ್ಕಳ ನೃತ್ಯ ರಂಜನೆಯು ಎಲ್ಲರ ಮನ ಮುದಗೊಳಿಸಿತು.

ನಂತರ 5 ನೇ ತಗತಿಯ ಮಕ್ಕಳಿಗೆ ಬೀಳ್ಕೊಡುಗೆ ಮಾಡಿದಾಗ ಎಲ್ಲರ ಕಣ್ಣುಗಳು ಒದ್ದೆಯಾದವು. ಪೋಷಕರೊಂದಿಗೆ ಭೋಜನಕ್ಕೆ ಕುಳಿತ ಮಕ್ಕಳಿಗೆ ತಂದೆ -ತಾಯಿಯ ಕೈ ತುತ್ತು ತಿನಿಸುವ ಕಾರ್ಯಕ್ರಮವು ಎಲ್ಲರ ಹೃದಯ ತುಂಬಿತು.

“ಉತ್ತಮ ಪರಿಸರದಲ್ಲಿ, ಉತ್ತಮರ ಸಹವಾಸದಲ್ಲಿ ಬೆಳೆದ ಮಕ್ಕಳು ದೇಶಕ್ಕೆ ಉತ್ತಮ ಕೊಡುಗೆಯಾಗು ತ್ತಾರೆ.” ಎಂದು ಮುಖ್ಯ ಶಿಕ್ಷಕರಾದ ಕೆ ಎಂ ರತ್ನಾಕರ ರವರು ಅಭಿಪ್ರಾಯ ಪಟ್ಟರು.
ಸಹಶಿಕ್ಷಕರಾದ ಶ್ರೀ ಮಂಜುನಾಥ ಎಂ, ಶಿಕ್ಷಕಿ ಶ್ರೀಮತಿ ರತ್ನಮ್ಮ, ಶಾಲಾಭಿವೃದ್ದಿ ಸಮಿತಿಯ ಅಧ್ಯಕ್ಷರಾದ ಶ್ರೀ ಸುಧಾಕರ ಎಸ್ ಡಿ ಎಂ ಸಿಯ ಪದಾಧಿಕಾರಿಗಳು, ಪೋಷಕರು ಮತ್ತು ಗ್ರಾಮಸ್ಥರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿ ಗೊಳಿಸಿದರು.
ಅಕ್ಷರ ಕಲಿಕೆಯ ಜೊತೆಗೆ ಸಂಸ್ಕಾರವನ್ನೂ ಮೈಗೂಡಿಸುತ್ತಿರುವ ನೀರೇರಿ ಶಾಲೆಯ ‘ಸಮುದಾಯದತ್ತ ಶಾಲೆ’ ಕಾರ್ಯಕ್ರಮ ಅಭಿನಂದನೀಯ. ಪೋಷಕರ ಪಾದಪೂಜೆ ಮತ್ತು ಮಕ್ಕಳ ಕಲಿಕಾ ಪ್ರದರ್ಶನವು ಸರ್ಕಾರಿ ಶಾಲೆಯ ಬದ್ಧತೆಗೆ ಸಾಕ್ಷಿಯಾಗಿದೆ. ಗ್ರಾಮೀಣ ಭಾಗದಲ್ಲಿ ಇಂತಹ ಮೌಲ್ಯಾಧಾರಿತ ಶಿಕ್ಷಣ ನೀಡುತ್ತಿರುವ ಶಿಕ್ಷಕರು ಮತ್ತು ಪೋಷಕರ ಜಂಟಿ ಪ್ರಯತ್ನ ಇತರರಿಗೆ ಮಾದರಿ.
- ಸಂಪಾದಕರು, ವಿಶ್ವಚೇತನ.ಕಾಂ
ಬರಹ: Chetandas Hosamane









