Bike Accident : ರಸ್ತೆಯಲ್ಲೇ ಕೊನೆ ಉಸಿರು ಸೂಡೂರು ರಸ್ತೆ ಕ್ರಾಸ್ ಬಳಿ ಹಿಟ್ ಅಂಡ್ ರನ್ ದುರಂತ

Photo of author

By vishwachetana807@gmail.com

ಸೂಡೂರು ಸೇತುವೆ ಕ್ರಾಸ್ ಬಳಿ ಅನಾಮಧೇಯ ವಾಹನ ಡಿಕ್ಕಿ; ಹಣಗೆರೆಕಟ್ಟೆಯ ಸುಬ್ರಹ್ಮಣ್ಯ (62) ಮೃತ — ಆರೋಪಿತ ವಾಹನ ಪತ್ತೆಗೆ ಪೊಲೀಸ್ ಬಲೆ

ರಿಪ್ಪನ್ ಪೇಟೆ: ಸೂಡೂರು ಸೇತುವೆ ಸಮೀಪದ ಕ್ರಾಸ್ ಬಳಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಅನಾಮಧೇಯ ವಾಹನವೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದು ಪರಾರಿಯಾಗಿರುವ ಘಟನೆ ನಡೆದಿದೆ.

ಈ ಅಪಘಾತದಲ್ಲಿ ದ್ವಿಚಕ್ರ ಸವಾರ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮೃತಪಟ್ಟ ವ್ಯಕ್ತಿಯನ್ನು ಹಣಗೆರೆಕಟ್ಟೆಯ ನಿವಾಸಿ ಸುಬ್ರಹ್ಮಣ್ಯ (62) ಎಂದು ಗುರುತಿಸಲಾಗಿದೆ ಎಂದು ಪೊಲೀಸ್ ಮೂಲಗಳು ಮಾಹಿತಿ ನೀಡಿವೆ.

ಅಪಘಾತದ ಬಳಿಕ ಮೃತದೇಹವನ್ನು ಪೋಸ್ಟ್ ಮಾರ್ಟಂಗೆ ಕಳುಹಿಸಲಾಗಿದೆ. ಘಟನೆ ನಡೆದ ಸ್ಥಳಕ್ಕೆ ತಕ್ಷಣವೇ PSI ರಾಜು ರೆಡ್ಡಿ ಹಾಗೂ ಪೊಲೀಸ್ ಸಿಬ್ಬಂದಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ತನಿಖೆಯನ್ನು ಕೈಗೊಂಡಿದ್ದಾರೆ.

ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಘಾತಕ್ಕೆ ಕಾರಣವಾದ ಅನಾಮಧೇಯ ವಾಹನವನ್ನು ಪತ್ತೆಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ. ಈ ಘಟನೆ ಕುರಿತು ರಿಪ್ಪನ್ ಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment