ಮಲೆನಾಡು ಅಡಿಕೆ ಪ್ರಕೋಷ್ಠ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷರಾಗಿ ಸಶಕ್ತ ನಾಯಕತ್ವಕ್ಕೆ ಮತ್ತೊಂದು ಗೌರವ
ಹೊಸನಗರ: ಮಲೆನಾಡು ಅಡಿಕೆ ಪ್ರಕೋಷ್ಠ ಅಧ್ಯಕ್ಷ ಸ್ಥಾನ ಹಾಗೂ ಜಿಲ್ಲಾ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಸಶಕ್ತವಾಗಿ ನಿಭಾಯಿಸುತ್ತಿರುವ ಡಾ. ಆರ್.ಎಂ. ಮಂಜುನಾಥ ಗೌಡರು ಇದೀಗ ರಾಜ್ಯ ಅಪೆಕ್ಸ್ ಬ್ಯಾಂಕ್ ನಿರ್ದೇಶಕರಾಗಿ ಮರು ಆಯ್ಕೆಯಾಗುವ ಮೂಲಕ ತಮ್ಮ ಜವಾಬ್ದಾರಿಗಳನ್ನು ಮತ್ತಷ್ಟು ವಿಸ್ತರಿಸಿಕೊಂಡಿದ್ದಾರೆ.
“ಮುಂಬರುವ ದಿನಗಳಲ್ಲಿ ನಮ್ಮ ಜನಪ್ರಿಯ ನಾಯಕರು ಅಧ್ಯಕ್ಷ ಸ್ಥಾನಕ್ಕೂ ಗುರಿ ದಿಟ್ಟಿಸಿದ್ದಾರೆ” ಎಂದು ಅವರ ಬೆಂಬಲಿಗರು ಸಂತಸ ವ್ಯಕ್ತಪಡಿಸಿದ್ದಾರೆ. ಹಿಂದೊಮ್ಮೆ ರಾಜ್ಯ ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿ ದಕ್ಷತೆಯನ್ನು ಪ್ರದರ್ಶಿಸಿದ್ದ ಮಂಜುನಾಥ ಗೌಡರಿಗೆ ಮತ್ತೊಮ್ಮೆ ಪದೋನ್ನತಿ ದೊರಕುವ ಎಲ್ಲಾ ಅರ್ಹತೆ ಮತ್ತು ಚಾಣಾಕ್ಷತೆ ಖಂಡಿತವಾಗಿಯೂ ಇದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.



ರಾಜ್ಯ ರಾಜಕೀಯದಲ್ಲಿ ಬದಲಾವಣೆಯ ಪರ್ವ ಹೆಚ್ಚಾಗುತ್ತಿರುವ ಸಂದರ್ಭದಲ್ಲಿ ತಾಲ್ಲೂಕು ರಾಜಕೀಯದಲ್ಲಿಯೂ ಮಂಜುನಾಥ ಗೌಡರ ಪಾತ್ರ ದಿನದಿಂದ ದಿನಕ್ಕೆ ದ್ವಿಗುಣಗೊಳ್ಳುತ್ತಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್ ಅವರ ಸ್ಪರ್ಧೆಗೆ ಶ್ರಮಪಟ್ಟು ಕೆಲಸ ಮಾಡಿರುವುದು, ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ನೀಡಿದ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಿದ ಕೀರ್ತಿ ಅವರಿಗೆ ಲಭಿಸಿದೆ.

2028ರ ವಿಧಾನಸಭಾ ಚುನಾವಣೆಗೆ ಈಗಾಗಲೇ ರಾಜಕೀಯ ವಾತಾವರಣ ಚುರುಕಾಗುತ್ತಿರುವ ಹಿನ್ನೆಲೆಯಲ್ಲಿ, ಸಾಕಷ್ಟು ಸವಾಲುಗಳ ನಡುವೆ ತಮ್ಮ ವೈಯಕ್ತಿಕ ವರ್ಚಸ್ಸು ಹಾಗೂ ಪಕ್ಷದ ಸಂಘಟನೆ ಮತ್ತು ಅಭಿವೃದ್ಧಿಗೆ ಇನ್ನಷ್ಟು ಶಕ್ತಿಯಾಗಿ ಶ್ರಮಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರ ಅಭಿಮಾನಿ ಬಳಗ ಅಭಿಪ್ರಾಯ ವ್ಯಕ್ತಪಡಿಸಿದೆ.

ಈ ಹಿನ್ನಲೆಯಲ್ಲಿ ನಾಯಕತ್ವದ ಮೇಲೆ ವಿಶ್ವಾಸ ವ್ಯಕ್ತಪಡಿಸಿ, ಅವರ ಮರು ಆಯ್ಕೆಯನ್ನು ಜನಪರ ಹೋರಾಟಗಳಿಗೆ ಸಿಕ್ಕಿರುವ ಮಹತ್ವದ ಬೆಂಬಲವೆಂದು ಅಭಿಮಾನಿಗಳು ಮತ್ತು ಕಾರ್ಯಕರ್ತರು ಬಣ್ಣಿಸಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿ, ಜನಸೇವಾ ಕಾರ್ಯಗಳು ಹಾಗೂ ಪಕ್ಷದ ಬಲವರ್ಧನೆಗೆ ಮತ್ತಷ್ಟು ತೊಡಗಿಸಿಕೊಳ್ಳುವ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ.
ಮರು ಆಯ್ಕೆಯ ಮೂಲಕ ಪಕ್ಷದೊಳಗಿನ ಏಕತೆ ಮತ್ತು ಜನರ ನಂಬಿಕೆ ಮತ್ತೊಮ್ಮೆ ದೃಢಪಟ್ಟಿದ್ದು, ಮುಂದಿನ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡು ಸಂಘಟನಾತ್ಮಕವಾಗಿ ಬಲಿಷ್ಠವಾಗಿ ಮುನ್ನುಗ್ಗುವ ಸಂಕಲ್ಪವನ್ನು ಅಭಿಮಾನಿ ಬಳಗ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಅವರಿಗೆ ಹಾರ್ದಿಕ ಅಭಿನಂದನೆಗಳು ಹಾಗೂ ಶುಭಾಶಯಗಳನ್ನು ಸಲ್ಲಿಸಲಾಗಿದೆ.







