ಸಾಹಿತ್ಯೋತ್ಸವದಲ್ಲಿ ಕಾದಂಬರಿಗಳ ವೈಭವಯುತ ಬಿಡುಗಡೆ
ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಮತ್ತು ಸುಮ ಸುಬ್ರಹ್ಮಣ್ಯ ದಂಪತಿ, ನಗರ ನಾರಾಯಣ ಕಾಮತ್ ಹಾಗೂ ತೃಪ್ತಿ ಕಾಮತ್ ಅವರು ವಿಶಿಷ್ಟವಾಗಿ ವಿನ್ಯಾಸಗೊಳಿಸಿದ ವೇದಿಕೆಯ ಕವಾಟವನ್ನು ತೆರೆದು ಕಾದಂಬರಿಗಳ ಮುಖಪುಟ ಬಿಡುಗಡೆ ಮಾಡಿದರು. ಬಳಿಕ ಅವಳಿ ಕಾದಂಬರಿಗಳಾದ “ಸಾಯ್ಬಿಣಿ” ಮತ್ತು *“ವಿ-ಚಕ್ರ”*ಗಳನ್ನು ಸಮಾಜಾರ್ಪಣೆ ಮಾಡಲಾಯಿತು.

ಡಾ. ಶ್ರೀಪತಿ ಹಳಗುಂದ ಹಾಗೂ ಶ್ರೀಮತಿ ವಸುಧಾ ಚೈತನ್ಯ ಅವರು ಕಾದಂಬರಿಗಳ ಕುರಿತು ವಿಶ್ಲೇಷಣೆ ಮಾಡಿ ಮಾತನಾಡಿದರು. ಮಾಸ್ತಿಕಟ್ಟೆ ಸುಬ್ರಹ್ಮಣ್ಯ ಅವರು ಮುಳುಗಡೆಯ ವ್ಯಥೆಯನ್ನು ವಿವರಿಸಿದರೆ, ನಾರಾಯಣ ಕಾಮತ್ ಅವರು “ಸಾಯ್ಬಿಣಿ” ಎಂಬುದು ದೇವಿ ಸ್ವರೂಪಿಣಿಯ ಪ್ರತೀಕ ಎಂದು ವಿವರಿಸಿದರು.



ಈ ಸಂದರ್ಭದಲ್ಲಿ ಶ್ರೀ ಸುಬ್ರಹ್ಮಣ್ಯ ಭಾಗವತರನ್ನು ಸನ್ಮಾನಿಸಲಾಯಿತು. ಅಶ್ವಿನಿ ಪಂಡಿತ್ ಅವರು ವಂದನಾರ್ಪಣೆ ಮಾಡಿದರು.

ಸಭೆಯ ಆರಂಭದಲ್ಲಿ ಶ್ರೀಮತಿ ಆರತಿ ಮಹೇಶ್ ಅವರು ನೃತ್ಯ ಪ್ರದರ್ಶನ ನೀಡಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು.
ಸುಧೀಂದ್ರ ಭಂಡಾರ್ಕರ್ ಅವರು ಸ್ವಾಗತ ಕೋರುತ್ತಾ ತಮ್ಮ ಅವಳಿ ಕೃತಿಗಳ ಕುರಿತು ಪ್ರಾಸ್ತಾವಿಕ ವಿವರಣೆ ನೀಡಿದರು. ಕಾರ್ಯಕ್ರಮವನ್ನು ಅಶ್ವಿನಿ ಪಂಡಿತ್ ಅವರು ನಿರೂಪಿಸಿದರು.
ಈ ಕಾರ್ಯಕ್ರಮದಲ್ಲಿ ಸಾಹಿತ್ಯ ಆಸಕ್ತರು ಹಾಗೂ ಗಣ್ಯಾತಿ ಗಣ್ಯರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ವಿಶೇಷ ಶೋಭೆ ತಂದರು.







