
ಶಿವಮೊಗ್ಗ: ಆಯನೂರು ಸಮೀಪದ ಚೆನ್ನಳ್ಳಿ ಗ್ರಾಮದ ಸೈನಾನಾಯ್ಕ ಎಂಬ ರೈತನ ತೋಟಕ್ಕೆ ನುಗ್ಗಿದ ಕಿಡಿಗೇಡಿಗಳು ತಮ್ಮ ಜಮೀನಲ್ಲಿದ್ದ ಸುಮಾರು 2-3 ವರ್ಷದ 250 ಅಡಿಕೆ ಗಿಡಗಳನ್ನು ರಾತ್ರೋ ರಾತ್ರಿ ಕಡಿದು ಹಾಕಿರುವುದು ಘಟನೆ ನಡೆದಿದೆ.


ಚೆನ್ನಳ್ಳಿ ಗ್ರಾಮದ ಸರ್ವೆ ನಂಬರ್ 19 ರಲ್ಲಿ 1 ಎಕರೆ ,19 ಗುಂಟೆ ಜಮೀನು ಸೈನಾ ನಾಯ್ಕ ಎಂಬ ರೈತನಿಗೆ ಸೇರಿದಾಗಿದ್ದು, ಶುಕ್ರವಾರ ರಾತ್ರಿ ತನ್ನ ಮಗ ಮತ್ತು ದೊಡ್ಡಪ್ಪ ಅನಂತನಾಯ್ಕ ಅವರು ತೋಟಕ್ಕೆ ಪ್ರತಿದಿನದಂತೆ ನೀರು ಬಿಟ್ಟು ಬಂದಿರುತ್ತಾರೆ. ನಂತರ ಶನಿವಾರ ರೈತ ಸೈನಾನಾಯ್ಕ ಎಂದಿನಂತೆ ನೀರು ಬಿಡಲು ಬೆಳಿಗ್ಗೆ ತೋಟಕ್ಕೆ ಹೋದಾಗ ಅಡಿಕೆ ಗಿಡಗಳನ್ನು ನೋಡಿದಾಗ ಸುಮಾರು 200-250 ಅಡಿಕೆ ಗಿಡಗಳನ್ನು ಯಾರೋ ಕಿಡಿಗೇಡಿಗಳು ಕಡಿದು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.

ತಮ್ಮ ಜಮೀನಿಗೆ ಅಕ್ರಮವಾಗಿ ಪ್ರವೇಶಿಸಿ ಕಷ್ಟ ಪಟ್ಟು 2-3 ವರ್ಷ ದಿಂದ ಕೃಷಿ ಮಾಡಿದ ಗಿಡಗಳನ್ನು ಕಡಿದು ಹಾಕಿದ ದುಷ್ಕರ್ಮಿಗಳನ್ನು ಪತ್ತೆ ಮಾಡಿಕೊಡುವಂತೆ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,ತನಿಖೆ ಮುಂದುವರೆದಿದೆ.
ಬರಹ: ತಂಡ, vishwachetana.com









