​ಹೊಸನಗರ: ಉದ್ಯಮಿ ಸುಪ್ರದೀಪ್ ನವೀನ್ ಮೇಲಿನ ಹಲ್ಲೆಗೆ ಖಂಡನೆ

Photo of author

By vishwachetana807@gmail.com

ಹೊಸನಗರ ತಾಲೂಕು ಒಕ್ಕಲಿಗ ಸಮಾಜದ ಅಧ್ಯಕ್ಷ ಹಾಲಗದ್ದೆ ಉಮೇಶ್ ಅವರು ಉದ್ಯಮಿ ಸುಪ್ರದೀಪ್ ನವೀನ್ ಮೇಲೆ ಸಾರ್ವಜನಿಕವಾಗಿ ಹಲ್ಲೆ ನಡೆಸಿರುವುದನ್ನು ರಾಜ್ಯ ಬ್ರಾಹ್ಮಣ ಮಹಾಸಭಾದ ಕೇಂದ್ರ ಕಾರ್ಯಕಾರಿ ಸಮಿತಿ ಸದಸ್ಯ ಎಂ.ಎಸ್. ರವಿಕುಮಾರ್ ತೀವ್ರವಾಗಿ ಖಂಡಿಸಿದ್ದಾರೆ.

ಇತ್ತೀಚೆಗೆ ತಾಲೂಕು ಕಚೇರಿ ಆವರಣದಲ್ಲಿ ವಿದ್ಯುತ್ ಸಮಸ್ಯೆಯ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಪ್ರದೀಪ್ ನವೀನ್ ಅವರ ಮೇಲೆ ಹಾಲಗದ್ದೆ ಉಮೇಶ್ ಏಕಾಯಕಿ ಹಲ್ಲೆ ನಡೆಸಿ, ಅಶ್ಲೀಲ ಶಬ್ದಗಳಿಂದ ನಿಂದಿಸಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಈಗಾಗಲೇ ದೂರು ದಾಖಲಾಗಿದೆ.

ರವಿಕುಮಾರ್ ಅವರು ಮಾತನಾಡಿ:“ವ್ಯಕ್ತಿಗಳ ನಡುವೆ ಭಿನ್ನಾಭಿಪ್ರಾಯವಿದ್ದರೆ ಕಾನೂನಿನ ಮೂಲಕ ಬಗೆಹರಿಸಿಕೊಳ್ಳಬೇಕು. ಒಬ್ಬ ಜವಾಬ್ದಾರಿಯುತ ಸಮುದಾಯದ ಅಧ್ಯಕ್ಷರಾಗಿ ಸಾರ್ವಜನಿಕವಾಗಿ ಈ ರೀತಿ ವರ್ತಿಸುವುದು ಸರಿಯಲ್ಲ. ಇದು ಸಮಾಜದ ಸ್ವಾಸ್ಥ್ಯವನ್ನು ಹಾಳುಗೆಡವುವ ಕೃತ್ಯ,” ಎಂದು ಎಂ.ಎಸ್. ರವಿಕುಮಾರ್ ತಿಳಿಸಿದರು.

ಸುಪ್ರದೀಪ್ ನವೀನ್  ಪ್ರತಿಕ್ರಿಯಿಸಿ: “ನಮ್ಮ ನಡುವಿನ ಕಾನೂನಾತ್ಮಕ ಹೋರಾಟಗಳನ್ನು ಕೋರ್ಟ್‌ನಲ್ಲಿ ಬಗೆಹರಿಸಿಕೊಳ್ಳೋಣ. ಅದನ್ನು ಬಿಟ್ಟು ಬೆದರಿಕೆ ಹಾಕುವುದು ಅಥವಾ ಹಲ್ಲೆ ಮಾಡುವುದು ನಿಲ್ಲಬೇಕು. ಈ ಹಿಂದೆಯೂ ನನ್ನ ಮೇಲೆ ಹಲ್ಲೆಯ ಯತ್ನ ನಡೆದಿದೆ,” ಎಂದು ಉದ್ಯಮಿ ಸುಪ್ರದೀಪ್ ಅಸಮಾಧಾನ ವ್ಯಕ್ತಪಡಿಸಿದರು.

ತಾಲೂಕು ಬ್ರಾಹ್ಮಣ ಸಮಾಜದ ಸಂಚಾಲಕ ಕೆ.ಎಸ್. ಸ್ವರೂಪ್ ಮಾತನಾಡಿ, ಇಂತಹ ಘಟನೆಗಳು ಸಮಾಜಗಳ ನಡುವೆ ಬಿರುಕು ಮೂಡಿಸುತ್ತವೆ. ಎಲ್ಲಾ ಸಮುದಾಯಗಳು ಸೌಹಾರ್ದತೆಯಿಂದ ಇರಬೇಕು ಎಂದು ಆಶಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ವಿವಿಧ ಸಮುದಾಯಗಳ ಪ್ರಮುಖರಾದ:ಡಿ.ಆರ್. ವಿನಯ್ ಕುಮಾರ್ ದುಮ್ಮ
,ಶ್ರೀಪತಿ ರಾವ್, ಗೋಪಿನಾಥ್, ಮುರುಳಿಧರ್
,ರಮೇಶ್ ಹಲಸಿನ ಕಟ್ಟೆ ,ಗಗನ್ ಗೌಡ ,ಸಮಾಜದ ಶಾಂತಿ ಮತ್ತು ಸುವ್ಯವಸ್ಥೆಯನ್ನು ಕಾಪಾಡಲು ಇಂತಹ ಘಟನೆಗಳು ಮರುಕಳಿಸದಂತೆ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಸಭೆಯಲ್ಲಿ ಒಮ್ಮತದ ಅಭಿಪ್ರಾಯ ವ್ಯಕ್ತಪಡಿಸಿದರು..

​ಹೊಸನಗರದ ತಾಲೂಕು ಕಚೇರಿ ಆವರಣದಲ್ಲಿ ನಡೆದ ಹಲ್ಲೆ ಘಟನೆ ಖಂಡನೀಯ. ವ್ಯಕ್ತಿಗಳ ನಡುವೆ ಎಷ್ಟೇ ಭಿನ್ನಾಭಿಪ್ರಾಯಗಳಿದ್ದರೂ ಅದನ್ನು ಕಾನೂನಾತ್ಮಕವಾಗಿ ಬಗೆಹರಿಸಿಕೊಳ್ಳಬೇಕೇ ಹೊರತು ಸಾರ್ವಜನಿಕವಾಗಿ ಕೈಕೈ ಮಿಲಾಯಿಸುವುದು ಸರಿಯಲ್ಲ.
​ಒಂದು ಸಮುದಾಯದ ಅಧ್ಯಕ್ಷ ಸ್ಥಾನದಲ್ಲಿರುವವರು ಸಮಾಜಕ್ಕೆ ಮಾದರಿಯಾಗಿರಬೇಕು. ಇಂತಹ ವರ್ತನೆಗಳು ಸಮಾಜದ ಶಾಂತಿ ಕದಡುವುದಲ್ಲದೆ, ವಿವಿಧ ಸಮುದಾಯಗಳ ನಡುವಿನ ಬಾಂಧವ್ಯಕ್ಕೆ ಧಕ್ಕೆ ತರುತ್ತವೆ. ಸಾರ್ವಜನಿಕ ಬದುಕಿನಲ್ಲಿರುವವರು ಆಕ್ರೋಶಕ್ಕೆ ಮಣಿಯದೆ ಸಂಯಮದಿಂದ ವರ್ತಿಸುವುದು ನಾಗರಿಕ ಸಮಾಜದ ಲಕ್ಷಣ. ಅಧಿಕಾರಿಗಳು ಈ ಬಗ್ಗೆ ಸೂಕ್ತ ತನಿಖೆ ನಡೆಸಿ ನ್ಯಾಯ ಒದಗಿಸಲಿ ಹಾಗೂ ಸಮಾಜದ ಸಾಮರಸ್ಯ ಕಾಪಾಡಲಿ.

​- ಸಂಪಾದಕರು, ವಿಶ್ವಚೇತನ.ಕಾಂ

ಬರಹ: Chetandas Hosamane

Leave a Comment