2026-27ನೇ ಸಾಲಿನ ದಸರಾ ಪೂರ್ವಭಾವಿ ಸಭೆಯಲ್ಲಿ ನೂತನ ಪದಾಧಿಕಾರಿಗಳ ಆಯ್ಕೆ; ಸುಧೀಂದ್ರ ಪಂಡಿತ್ ಕಾರ್ಯದರ್ಶಿಯಾಗಿ ನೇಮಕ

ಹೊಸನಗರ: 2026-27ನೇ ಸಾಲಿನ ಹೊಸನಗರ ದಸರಾ ಆಚರಣೆ ಸಮಿತಿಯ ಅಧ್ಯಕ್ಷರಾಗಿ ಎನ್. ಚಂದ್ರಶೇಖರ್ ಶೇಟ್ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ಸುಧೀಂದ್ರ ಪಂಡಿತ್ ಅವರನ್ನು ಆಯ್ಕೆ ಮಾಡಲಾಗಿದೆ.

ಗುರುವಾರ ಹೊಸನಗರ ಪಟ್ಟಣ ಪಂಚಾಯತ್ ಸಭಾಂಗಣದಲ್ಲಿ ತಹಶೀಲ್ದಾರ್ ಭರತ್ ರಾಜ್ ಅವರ ಅಧ್ಯಕ್ಷತೆಯಲ್ಲಿ ನಡೆದ ದಸರಾ ಪೂರ್ವಭಾವಿ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನೆರವೇರಿತು.

ಸಮಿತಿಯ ಸಹ ಕಾರ್ಯದರ್ಶಿಯಾಗಿ ಭೋಜಪ್ಪ ಗೌಡ ಹಾಗೂ ಖಜಾಂಚಿಯಾಗಿ ಚಿರಾಗ್ ಅವರನ್ನು ಆಯ್ಕೆ ಮಾಡಲಾಯಿತು. ಬಳಿಕ ವಿವಿಧ ಸಮಿತಿಗಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರ ಆಯ್ಕೆಗೂ ಮುನ್ನ ನಿಕಟಪೂರ್ವ ಅಧ್ಯಕ್ಷ ವಿನಯ್ ಕುಮಾರ್ ಧುಮ್ಮ ಅವರು ಹಿಂದಿನ ಸಾಲಿನ ಲೆಕ್ಕಪತ್ರವನ್ನು ಸಭೆಯ ಮುಂದೆ ಮಂಡಿಸಿದರು.
ಸಭೆಯಲ್ಲಿ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಹರೀಶ್ ಎಂ.ಎನ್., ಮಂಜು ಸಣ್ಣಕ್ಕಿ, ಸ್ವಾಮಿ, ವರ್ತಕರ ಸಂಘದ ಅಧ್ಯಕ್ಷ ಪೂರ್ಣೇಶ್, ಮುರುಳಿಧರ್, ರಾಧಿಕಾ ರತ್ನಾಕರ್ ಶೇಟ್ಟಿ, ಸಂತೋಷ್ ಶೇಟ್, ವಿಠಲ್ ರಾವ್, ನೋರಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಬರಹ: Chetandas Hosamane









