ಸಂಕಷ್ಟದಲ್ಲಿರುವ ರೈತ ಕುಟುಂಬಕ್ಕೆ ಡಾ. ಆರ್. ಎಂ. ಮಂಜುನಾಥ್ ಗೌಡ ಅವರ ಮಾನವೀಯ ಸ್ಪಂದನೆ

ಹೆದ್ದಾರಿಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳವಳ್ಳಿ ಗ್ರಾಮದ ರೈತ ಸೋಮಣ್ಣ ಅವರು ಪತ್ನಿಯೊಂದಿಗೆ ಡೈರಿಗೆ ಹಾಲು ನೀಡಲು ತೆರಳುವ ವೇಳೆ ಸಂಭವಿಸಿದ ದುರ್ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡು ಒಂದು ಕಾಲನ್ನು ಕಳೆದುಕೊಂಡಿರುವುದು ಅತ್ಯಂತ ವಿಷಾದನೀಯ ಸಂಗತಿಯಾಗಿದೆ. ಇದೇ ಸಮಯದಲ್ಲಿ ಮಗಳ ಮದುವೆ ಸಿದ್ಧತೆಯಲ್ಲಿದ್ದ ಕುಟುಂಬಕ್ಕೆ ಈ ಘಟನೆ ದೊಡ್ಡ ಆಘಾತವನ್ನುಂಟುಮಾಡಿದ್ದು, ಆರ್ಥಿಕ ಹಾಗೂ ಮಾನಸಿಕ ಸಂಕಷ್ಟಕ್ಕೆ ತಳ್ಳಿದೆ.

ಈ ಹಿನ್ನೆಲೆಯಲ್ಲಿ ರೈತ ಮುಖಂಡರು ಹಾಗೂ ಜನಪ್ರಿಯ ನಾಯಕರು ಆದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರು ಘಟನೆಯ ಮಾಹಿತಿ ತಿಳಿದು ತಕ್ಷಣ ಕುಟುಂಬವನ್ನು ಭೇಟಿ ಮಾಡಿ ಧೈರ್ಯ ತುಂಬಿದರು. ಸಂಕಷ್ಟದಲ್ಲಿರುವ ಕುಟುಂಬದ ನೆರವಿಗಾಗಿ ವೈಯಕ್ತಿಕವಾಗಿ ಧನಸಹಾಯ ನೀಡುವುದರೊಂದಿಗೆ, ಜಿಲ್ಲಾ ಹಾಲು ಒಕ್ಕೂಟದ ಅಧ್ಯಕ್ಷರು ಗುರುಶಕ್ತಿ ವಿದ್ಯಾಧರ್ ಹಾಗೂ ಸ್ಥಳೀಯ ಮಹಿಳಾ ಹಾಲು ಮಾರಾಟಗಾರರ ಸಂಘದ ವತಿಯಿಂದ ಸಹ ಆರ್ಥಿಕ ನೆರವು ಒದಗಿಸಲಾಯಿತು.

ಈ ಸಂದರ್ಭದಲ್ಲಿ ಹೊಸನಗರ ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ಎಂ.ಎಂ. ಪರಮೇಶ್ವರ, ಮಾಜಿ ಗ್ರಾಮ ಪಂಚಾಯಿತಿ ಸದಸ್ಯರಾದ ಶಣ್ಮುಖ, ಜಿಲ್ಲಾ ಯುವ ಕಾಂಗ್ರೆಸ್ ಹಿಂದೂಳಿದ ವರ್ಗಗಳ ವಿಭಾಗದ ಪ್ರಧಾನ ಕಾರ್ಯದರ್ಶಿ ಕುರುವಳ್ಳಿ ನಾಗರಾಜ್, ಹೆದ್ದಾರಿಪುರದ ಕಾಂಗ್ರೆಸ್ ಮುಖಂಡರಾದ ಅಭಿ ಶೆಟ್ಟಿ ಹಾಗೂ ಸ್ಥಳೀಯ ಮಹಿಳಾ ಹಾಲು ಉತ್ಪಾದಕರ ಮಾರಾಟಗಾರರ ಸಂಘದ ಅಧ್ಯಕ್ಷರಾದ ಆರ್ಚನ ಅಭಿಶೆಟ್ಟಿ ಕಾರ್ಯದರ್ಶಿ ಶಾಂತಮ್ಮ ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಡಾ. ಆರ್. ಎಂ. ಮಂಜುನಾಥ್ ಗೌಡ ಅವರು, “ರೈತರ ಜೀವನದಲ್ಲಿ ಇಂತಹ ದುರ್ಘಟನೆಗಳು ಸಂಭವಿಸಿದಾಗ ಸಮಾಜವು ಒಂದಾಗಿ ನಿಂತು ಸಹಾಯಹಸ್ತ ಚಾಚಬೇಕು. ಸೋಮಣ್ಣ ಅವರ ಕುಟುಂಬದ ಜೊತೆ ನಾವು ಸದಾ ಇದ್ದೇವೆ,” ಎಂದು ತಿಳಿಸಿದರು.

ಬರಹ: Chetandas Hosamane

Leave a Comment