
ಹೊಸನಗರ: ತಾಲೂಕಿನ ವೀರಶೈವ ಲಿಂಗಾಯತ ಸಮಾಜದ ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸಲು ಪಟ್ಟಣದ ನೆಹರು ಕ್ರೀಡಾ ಮೈದಾನದಲ್ಲಿ ಏಪ್ರಿಲ್ 18 ಮತ್ತು 19 ರಂದು ‘ವೀರಶೈವ ಲಿಂಗಾಯಿತ ಟ್ರೋಫಿ 2026’ ಲೈಟ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿದೆ.

ಏಪ್ರಿಲ್ 18ರ ಶನಿವಾರ ಬೆಳಿಗ್ಗೆ 8:00 ಗಂಟೆಗೆ ಪಂದ್ಯಾವಳಿಯ ಉದ್ಘಾಟನಾ ಸಮಾರಂಭ ನಡೆಯಲಿದ್ದು, ಸಮಾಜದ ಮುಖಂಡರು ಚಾಲನೆ ನೀಡಲಿದ್ದಾರೆ. ಎರಡು ದಿನಗಳ ಕಾಲ ನಡೆಯುವ ಈ ಕ್ರೀಡಾಕೂಟದಲ್ಲಿ ತಾಲೂಕಿನ ವಿವಿಧ ತಂಡಗಳು ಭಾಗವಹಿಸಿ ಜಿದ್ದಾಜಿದ್ದಿನ ಪೈಪೋಟಿ ನಡೆಸಲಿವೆ.
ವಿಜೇತ ತಂಡಗಳಿಗೆ ಭರ್ಜರಿ ನಗದು ಬಹುಮಾನಗಳನ್ನು ನೀಡಲಾಗುತ್ತಿದ್ದು, ಪ್ರಥಮ ಬಹುಮಾನವಾಗಿ ₹44,444, ದ್ವಿತೀಯ ಬಹುಮಾನ ₹33,333, ತೃತೀಯ ಬಹುಮಾನ ₹5,555 ಹಾಗೂ ಚತುರ್ಥ ಬಹುಮಾನವಾಗಿ ₹4,444 ಗಳೊಂದಿಗೆ ಆಕರ್ಷಕ ಟ್ರೋಫಿಗಳನ್ನು ವಿತರಿಸಲಾಗುವುದು.

ಏಪ್ರಿಲ್ 19ರ ಸಂಜೆ 5:00 ಗಂಟೆಗೆ ಸಮಾರೋಪ ಹಾಗೂ ಬಹುಮಾನ ವಿತರಣಾ ಸಮಾರಂಭ ನಡೆಯಲಿದೆ. ಈ ಕ್ರೀಡಾ ಹಬ್ಬವನ್ನು ವೀಕ್ಷಿಸಲು ಮತ್ತು ಕ್ರೀಡಾಪಟುಗಳನ್ನು ಹುರಿದುಂಬಿಸಲು ತಾಲೂಕಿನ ಸಮಸ್ತ ಕ್ರೀಡಾಪ್ರೇಮಿಗಳು ಹಾಗೂ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕೆಂದು ಸಂಘಟಕರು ಮನವಿ ಮಾಡಿದ್ದಾರೆ.
ಬರಹ:- ಚೇತನ್ ದಾಸ್ ಹೊಸಮನೆ









